ಹುಬ್ಬಳ್ಳಿ: ಬಿಜೆಪಿ ಸರ್ಕಾರ ಹುಟ್ಟಿದ್ದೆ ಶಾಸಕರ ಖರೀದಿಯಿಂದ, ಇದೀಗ ಬಿಜೆಪಿ ಶಾಸಕ ಬಸನಗೌಡ ಯತ್ನಾಳ ದೆಹಲಿಯಿಂದ ಯಾರೋ ಬಂದು 2,500 ಕೋಟಿ ಕೊಟ್ಟರೆ ಮುಖ್ಯಮಂತ್ರಿ ಮಾಡಲಾಗುವುದು ಸಿದ್ದತೆ ಮಾಡಿಕೊಳ್ಳಿ ಎಂಬ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯ ಆಡಳಿತ ವ್ಯವಸ್ಥೆಯನ್ನೆ ಅಣುಕಿಸುತ್ತದೆ. ಕೂಡಲೇ ಅವರನ್ನು ಸರ್ಕಾರ ಬಂಧಿಸಬೇಕು. ಮತ್ತು ಅವರ ಹಿಂದೆ ಇರುವ ಜನರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.
ಹುಬ್ಬಳ್ಳಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ 40 ವರ್ಷ ರಾಜಕೀಯ ಜೀವನದಲ್ಲಿ ಇಂತಹ ಬ್ರಹ್ಮಾಂಡ ಭ್ರಷ್ಟಾಚಾರ ನೋಡಿಲ್ಲ. ಮಂತ್ರಿ ಸ್ಥಾನಕ್ಕೆ 50 ರಿಂದ 100 ಕೋಟಿ ತಯಾರಿ ಮಾಡಿಕೊಳ್ಳಿ ಎಂದು ಯತ್ನಾಳ ಹೇಳಿದ್ದಾರೆ. ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಹಾಗಾಗಿ ಮುಖ್ಯಮಂತ್ರಿಗಳಿಗೆ ಬದ್ದತೆ ಇದ್ದರೆ, ಅವರ ಪಕ್ಷದ ಗೌರವವನ್ನು ಉಳಿಸಿಕೊಳ್ಳುವುದು ಇದ್ದರೆ ಕೂಡಲೇ ತನಿಖೆಗೆ ಸೂಚನೆ ನೀಡಲಿ ಎಂದರು.
ಈಗಾಗಲೇ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅದರ ಬಗ್ಗೆ ರಾಜ್ಯದ ಜನತೆ ಚರ್ಚೆ ಮಾಡುವಂತಾಗಿದೆ. ಗುತ್ತಿಗೆದಾರ 40% ಕಮಿಷನ್, ಸರ್ಕಾರಿ ನೌಕರಿಯ ನೇಮಕಾತಿಯಲ್ಲಿ ಕಮಿಷನ್ ದಂಧೆ ಹೀಗೆ ಹೋಟೆಲ್ ನಲ್ಲಿ ಯಾವ ರೀತಿಯಲ್ಲಿ ತಿಂಡಿ ಬೆಲೆ ನಿಗದಿ ಮಾಡಿದ್ದಾರೆ. ಹಾಗೇ ಇದೀಗ ಮಂತ್ರಿ ಮಾಡಲು ಸಹಿತ ದರ ನಿಗದಿ ಮಾಡಿರುವುದು ಶೋಚನೀಯ ಎಂದರು.
ರಾಜ್ಯದ ಮುಖ್ಯಮಂತ್ರಿಗಳು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳತ್ತಾ ಇದ್ದಾರೆ. ಸಂವಿಧಾನ ಸುಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಿಎಂ ವಿರುದ್ಧ ಹರಿಹಾಯ್ದರು.
ಕೂಡಲೇ ಶಾಸಕ ಬಸನಗೌಡ ಯತ್ನಾಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು. ಅಲ್ಲದೇ ಇದರ ಹಿಂದೆ ಯಾರೆಲ್ಲ ಭಾಗಿಯಾಗಿದ್ದಾರೆ ಅವರ ವಿರುದ್ಧ ಕಾನೂನು ಕ್ರಮ ಆಗಬೇಕೆಂದು ಒತ್ತಾಯಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/05/2022 10:51 am