ಹುಬ್ಬಳ್ಳಿ: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮವಾಗಿದೆ ಎಂಬುವಂತದ್ದು, ಮೇಲ್ನೋಟಕ್ಕೆ ಗೊತ್ತಾದ ಮೇಲೆ ತನಿಖೆಗೆ ಆದೇಶ ನೀಡಲಾಗಿದೆ. ಅಲ್ಲದೇ ತನಿಖೆ ನಡೆದು ಕೋರ್ಟ್ ಆದೇಶ ಬರುವವರೆಗೂ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮರು ಪರೀಕ್ಷೆಗೆ ಆದೇಶ ನೀಡಿದೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರು ಪಾಸ್ ಆಗ್ತಾರೆ. ನಕಲು ಮಾಡಿದವರು ಫೇಲ್ ಆಗ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಅಕ್ರಮ ನಡೆದಿದೆ ಎಂದು ಗೊತ್ತಾದ ಮೇಲೆ ಹಾಗೂ ತನಿಖೆಗೆ ವಹಿಸಿದ ಮೇಲೆ, ಹಾಗೆಯೇ ನೇಮಕ ಮಾಡಿಕೊಂಡರೇ, ತಪ್ಪಿತಸ್ಥರು ಯಾರು ? ಪ್ರಮಾಣಿಕರು ಯಾರು ? ಅಂತ ಹೇಗೆ ಗೊತ್ತಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈಗ ಸೂಕ್ತ ನಿರ್ಧಾರವನ್ನು ಕೈಗೊಂಡಿದೆ ಎಂದರು.
ಪ್ರಾಮಾಣಿಕವಾಗಿ ನೇಮಕಾತಿ ನಡೆಯಬೇಕು. ಯಾವುದೇ ಸಂಶಯಕ್ಕೂ ದಾರಿಯಾಗಬಾರದು ಎಂಬುವಂತ ಸದುದ್ದೇಶದಿಂದ ಸರ್ಕಾರ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರು ಭಯಪಡುವ ಅಗತ್ಯವಿಲ್ಲ. ನಕಲು ಮಾಡಿ ಬರೆದವರು ಬಾಯಿ ಬಡೆದುಕೊಳ್ಳುತ್ತಾರೆ ಎಂದು ಹೇಳಿದರು.
ತನಿಖೆ ಪೂರ್ಣಗೊಂಡು ಮತ್ತೆ ನೇಮಕ ಆಗುವಷ್ಟರಲ್ಲಿ ಅವರೆಲ್ಲರೂ ರಿಟೈರ್ಡ್ ಹಂತಕ್ಕೆ ಬಂದಿರುತ್ತಾರೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಮರು ಪರೀಕ್ಷೆ ನಡೆಸಲು ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಶಾಸಕರಾದ ಅಮೃತ ದೇಸಾಯಿಯವರು ಬಹಳಷ್ಟು ದಿನಗಳಿಂದ ನಮ್ಮ ಕ್ಷೇತ್ರಕ್ಕೆ ಬರಬೇಕು ಎಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈಗ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿಯವರು ಇಲ್ಲಿಯೇ ಇರುವುದರಿಂದ ಈಗ ಆಗಮಿಸಿದ್ದೇನೆ. ಎಲ್ಲರೂ ಸೇರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇವೆ ಎಂದು ಧಾರವಾಡ ಜಿಲ್ಲಾ ಪ್ರವಾಸದ ಕುರಿತು ಮಾಹಿತಿ ನೀಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/04/2022 07:45 pm