ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ದೇಶದಲ್ಲಿ ಅನ್ನ ಮೂಲ ಆರ್ಥಿಕ ನೀತಿ ಅವಶ್ಯಕತೆ ಇದೆ

ಧಾರವಾಡ: ಧಾರವಾಡದ ಕಡಪಾ ಮೈದಾನದಲ್ಲಿ ಎಐಕೆಎಂಎಸ್ ರೈತ ಸಂಘಟನೆ ವತಿಯಿಂದ ಗುರುವಾರ ರಾಜ್ಯಮಟ್ಟದ ಎರಡನೇ ರೈತ ಕೃಷಿ ಕಾರ್ಮಿಕರ ಬೃಹತ್ ಸಮ್ಮೇಳನ ಜರುಗಿತು. ಸಮಾವೇಶಕ್ಕೂ ಮುನ್ನ ಧಾರವಾಡದ ಪ್ರಮುಖ ರಸ್ತೆಗಳಲ್ಲಿ ರೈತರು ಬೃಹತ್ ಮೆರವಣಿಗೆ ನಡೆಸಿದರು.

ನಂತರ ಕಡಪಾ ಮೈದಾನದಲ್ಲಿ ರೈತರು ಹಾಗೂ ನಾಯಕರು ಬಿಸಿಲನ್ನೂ ಲೆಕ್ಕಿಸದೇ ಸಮಾವೇಶದಲ್ಲಿ ಪಾಲ್ಗೊಂಡರು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಬಂಡಾಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ, ದೇಶದ ರೈತರು, ಮಹಿಳೆಯರು, ಬಡವರ ಪಾಲಿಗೆ ಅನ್ನ ಮೂಲ ಆರ್ಥಿಕ ನೀತಿ ಜಾರಿಗೆ ತರುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ಇಂದು ರೈತರ ಕಷ್ಟಕ್ಕೆ ಕನ್ನ ಮೂಲ ಬಂಡವಾಳ ಶಾಹಿ ಆರ್ಥಿಕ ನೀತಿಗಳೇ ಕಾರಣವಾಗಿವೆ. ನಾವು ಸೈದ್ಧಾಂತಿಕವಾಗಿ ಈ ಆರ್ಥಿಕ ನೀತಿ ವಿರುದ್ಧ ಹೋರಾಟ ನಡೆಸಬೇಕಿದೆ. ದೇಶದಲ್ಲಿ 24 ಕೋಟಿ 39 ಲಕ್ಷ ಕುಟುಂಬಗಳಿವೆ. ಅದರಲ್ಲಿ 17 ಲಕ್ಷ 90 ಕೋಟಿ ಕುಟುಂಬಗಳು ಗ್ರಾಮೀಣ ಭಾಗದಲ್ಲಿವೆ. ಇದರಲ್ಲಿ ಶೇ.29.30 ರಷ್ಟು ಕುಟುಂಬದವರಿಗೆ ಕೃಷಿ ಭೂಮಿಯೇ ಇಲ್ಲ. ಹೀಗಾಗಿ ಭೂಮಿ ಇಲ್ಲದವರ ಪರವಾಗಿಯೂ ನಾವು ಹೋರಾಟ ಮಾಡಬೇಕಿದೆ ಎಂದರು.

ಕೃಷಿ ಜಮೀನಿಗೆ ನೀರು ಸಿಗದ, ಭೂಮಿ ಇರದ ರೈತರ ಪರವಾಗಿ ಧ್ವನಿ ಎತ್ತಬೇಕಿದೆ. ಹೀಗಾಗಿ ಗ್ರಾಮೀಣ ಭಾಗದ ಜನರ ದೃಷ್ಠಿಯಿಂದ ಅನ್ನ ಮೂಲ ಆರ್ಥಿಕ ನೀತಿ ಬರದೇ ಇದ್ದರೆ ಎಲ್ಲವೂ ಉಳ್ಳವರ ಪಾಲಾಗುತ್ತದೆ. ಮೊನ್ನೆ ಮಂಡಿಸಿದ ಬಜೆಟ್‌ನಲ್ಲಿ ಉದ್ಯೋಗ ಖಾತ್ರಿಗೆ ಮೀಸಲಿಟ್ಟಿದ್ದ ಅನುದಾನದಲ್ಲಿ ಶೇ.25 ರಷ್ಟು ಅನುದಾನವನ್ನು ಕಡಿತಗೊಳಿಸಲಾಗಿದೆ. ಗ್ರಾಮೀಣಾಭಿವೃದ್ಧಿಯಲ್ಲಿ ಶೇ.10.5 ರಷ್ಟು ಅನುದಾನವನ್ನು ಕಡಿತಗೊಳಿಸಲಾಗಿದೆ. ಇದು ಸತ್ಯಕ್ಕೆ ಸಾಕ್ಷಿ ಕೇಳೋ ಕಾಲ. ಸುಳ್ಳಿನ ಭರಾಟೆಯೇ ದೇಶದಲ್ಲಿ ನಡೆದಿದೆ ಎಂದರು.

Edited By : Nagesh Gaonkar
Kshetra Samachara

Kshetra Samachara

28/04/2022 10:57 pm

Cinque Terre

46.63 K

Cinque Terre

1

ಸಂಬಂಧಿತ ಸುದ್ದಿ