ಹುಬ್ಬಳ್ಳಿ: ಹುಟ್ಟುಹಬ್ಬ ಬಂತೆಂದರೆ ಸಾಕು... ಪಾರ್ಟಿ, ಮೋಜು- ಮಸ್ತಿ ಮಾಡುವವರೇ ಈ ಕಾಲದಲ್ಲಿ ಹೆಚ್ಚು. ಆದರೆ, ಇಲ್ಲೊಬ್ಬ ಯುವನಾಯಕ, ಮಾನಸಿಕ ವಿಕಲಚೇತನ ಮಕ್ಕಳೊಂದಿಗೆ ತನ್ನ ಜನ್ಮದಿನ ಆಚರಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲಂದರ್ ಮುಲ್ಲಾ ಹಟೇಲಸಾಬ್ ಅವರು, ಇಂದು ತಮ್ಮ ಹುಟ್ಟುಹಬ್ಬವನ್ನು ಹುಬ್ಬಳ್ಳಿಯ ಉಣಕಲ್‌ನಲ್ಲಿರುವ ಮಂದಮತಿ ಮಹಿಳೆಯರ ಅನುಪಾಲನಾ ವಸತಿಯಲ್ಲಿ ಮಕ್ಕಳ ಕೈಯಿಂದ ಸಸಿಗಳನ್ನು ನೆಡಿಸಿ, ಮಕ್ಕಳಿಗೆ ಸಿಹಿ ಹಂಚಿ, ಊಟ ಬಡಿಸುವುದರ ಮೂಲಕ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಈ ಸಂದರ್ಭ ಮಹಾನಗರ ಪಾಲಿಕೆ ಸದಸ್ಯ ಮಹಾದೇವಪ್ಪ ನರಗುಂದ, ಉದ್ಯಮಿ ಹಾಗೂ ಸಮಾಜ ಸೇವಕರಾದ ರಮೇಶ ಮಹಾದೇವಪ್ಪನವರ, ಸುಜಾತ ಚನ್ನಪ್ಪ ಗೌಡ್ರ, ನಜೀರ್ ಆಹ್ಮದ್ ಮುಲ್ಲಾ, ಬಶೀರ್ ಖಾನ್ ಮುಸಾಫಿರ್, ಕಾಶಿಂ ಕೂಡಲಗಿ, ನಂದೀಶ ವಡ್ಡಟ್ಟಿ, ಕಲ್ಲಪ್ಪ ಭರಮಗೌಡ್ರ, ರವಿ ಮಳಗಿ, ಯುನುಸ, ರಫೀಕ್ ನದಾಫ್, ಶಕೀಲ್ ವಲಿ ಆಹ್ಮದ್, ಹಸನಸಾಬ್ ತಾಸೇವಾಲೆ, ಕಲಂದರ ಅಣ್ಣಿಗೇರಿ, ಅಂಬರ್ ಬಿಜಾಪುರ ಉಪಸ್ಥಿತರಿದ್ದರು.
Kshetra Samachara
24/04/2022 06:21 pm