ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬಲಾಡ್ಯವಾಗಿದೆ; ಪ್ರಕಾಶ್ ಅಂಗಡಿ

ಅಣ್ಣಿಗೇರಿ: 2023ರ ವಿಧಾನಸಭಾ ಚುನಾವಣೆಯಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಬಾವುಟ ಹಾರುತ್ತದೆ. ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಬಲಾಡ್ಯವಾಗಿದೆ. ಅದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಅಂಗಡಿ ಹೇಳಿದ್ದಾರೆ.

ಜೆಡಿಎಸ್ ಪಕ್ಷದ ತಾಲೂಕು ಮತ್ತು ಅಣ್ಣಿಗೇರಿ ನಗರ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿಅವರು ಮಾತನಾಡಿದರು. ಇನ್ನು ಹುಬ್ಬಳ್ಳಿ-ಧಾರವಾಡ ಮಹಾನಗರದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಗುರುರಾಜ ಹುಣಸಿಮರದ ಅವರು ಮಾತನಾಡಿ, ಪಕ್ಷ ಸಂಘಟನೆಗಾಗಿ ನಾವು-ನೀವೆಲ್ಲರೂ ಹೆಚ್ಚು ಶ್ರಮವಹಿಸಿ ಪಕ್ಷವನ್ನು ಕಟ್ಟಲು ವಿನಂತಿಸಿದರು.

ಬಿ.ಬಿ ಗಂಗಾಧರ್ ಮಠ ಅವರು ಮಾತನಾಡಿ, ಜಿಲ್ಲೆಯಲ್ಲಿ ನವಲಗುಂದ ವಿಧಾನಸಭಾಕ್ಷೇತ್ರ ಅತ್ಯಂತ ಬಲಶಾಲಿಯಾಗಿದೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಶಾಸಕರನ್ನು ಆಯ್ಕೆ ಮಾಡುವಲ್ಲಿ ಕಾರ್ಯಕರ್ತರು ಶ್ರಮವಹಿಸಬೇಕಾಗುತ್ತದೆ ಎಂದು ಮಾತನಾಡಿದರು.

ಇನ್ನೂ ತಾಲೂಕು ಜೆಡಿಎಸ್ ನೂತನ ಪದಾಧಿಕಾರಿಗಳ ಪಟ್ಟಿ ಈ ರೀತಿ ಇದೆ ಅಧ್ಯಕ್ಷರಾಗಿ ಡಿ.ಎಂ.ಶಲವಡಿ, ಉಪಾಧ್ಯಕ್ಷರಾಗಿ ಮಾಬುಸಾಬ್ ಸಂಗಟ್ಟಿ, ರುದ್ರಯ್ಯ, ಕಾರ್ಯಾಧ್ಯಕ್ಷರಾಗಿ ನಾರಾಯಣ ಮಾಡಳ್ಳಿ,ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ, ನಗರ ಜೆಡಿಎಸ್ ನೂತನ ಪದಾಧಿಕಾರಿಗಳ ಪಟ್ಟಿ ಈ ರೀತಿ ಇದೆ ಅಧ್ಯಕ್ಷರಾಗಿ ವೀರೇಶ ಶಾನುಭೋಗರ, ಉಪಾಧ್ಯಕ್ಷರಾಗಿ ಈರಣ್ಣ ಕುಬಸದ, ಹಸನಸಾಬ ಗಾಡಗೋಳಿ, ಕಾರ್ಯದರ್ಶಿಗಳಾಗಿ ದಸ್ತಗೀರಸಾಬ ಸಂಗಟಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಆಡಕಾವು. ಕಾರ್ಯಕ್ರಮದ ನಿರೂಪಣೆಯನ್ನು ಯೋಗೀಶ್ ಚಲವಾದಿ ಅವರು ನಡೆಸಿದ್ದರು,ವಂದನಾರ್ಪಣೆಯನ್ನು ನಿಂಗಪ್ಪ ಬಡ್ಡೆಪ್ಪನವರು ನಡೆಸಿದರು.

ನಂದೀಶ ಪಬ್ಲಿಕ್ ನೆಕ್ಸ್ಟ್ ಅಣಿಗೇರಿ

Edited By :
Kshetra Samachara

Kshetra Samachara

24/04/2022 04:41 pm

Cinque Terre

23.38 K

Cinque Terre

2

ಸಂಬಂಧಿತ ಸುದ್ದಿ