ಧಾರವಾಡ: ಶಾಸಕ ರೇಣುಕಾಚಾರ್ಯ ಅವರು ಮದರಸಾಗಳನ್ನು ಬಂದ್ ಮಾಡಬೇಕು ಎಂಬ ಹೇಳಿಕೆಗೆ ಶಾಸಕ ಅರವಿಂದ ಬೆಲ್ಲದ ಅವರು ಯಾವುದೇ ಪ್ರತಿಕ್ರಿಯೆ ನೀಡದೇ ಹೊರಟು ಹೋದ ಪ್ರಸಂಗ ಧಾರವಾಡದಲ್ಲಿ ನಡೆಯಿತು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾಚಾರ್ಯ ಅವರ ಈ ಹೇಳಿಕೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಯಾವುದೇ ಉತ್ತರ ಕೊಡದೇ ಹೊರಟು ಹೋದರು.
ಇನ್ನು ಕೋಮು ಗಲಭೆಗೆ ಬಿಜೆಪಿ ಪ್ರಚೋದನೆ ನೀಡುತ್ತಿದೆ ಎಂಬ ಡಿಕೆಶಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬೆಲ್ಲದ, ಹುಬ್ಬಳ್ಳಿ ಗಲಭೆಗೆ ಯಾರು ಪ್ರಚೋದನೆ ನೀಡಿದ್ದರು, ಯಾರನ್ನು ವಶಕ್ಕೆ ಪಡೆಯಲಾಗುತ್ತಿದೆ ಎಂಬುದನ್ನು ಡಿಕೆಶಿ ಮೊದಲು ತಿಳಿದುಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ಭಾರತ ಮತ್ತು ಇಡೀ ಕರ್ನಾಟಕದಲ್ಲಿ ಜಿಯೊ ಬಂದ್ ಮೂವ್‌ಮೆಂಟ್‌ನಿಂದ ತರಬೇತಿ ಪಡೆದು ಮುಸ್ಲಿಂ ಮೌಲ್ವಿಗಳು ಬರುತ್ತಿದ್ದಾರೆ. ಇವರಿಗೆ ಸೌದಿ ಅರೇಬಿಯಾದಿಂದ ಅನುದಾನ ಕೂಡ ಬರುತ್ತಿದೆ. ಇವರು ಇಲ್ಲಿಗೆ ಬಂದು ಜನರಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ ಎಂದರು.
ಬೇರೆ ಕಡೆಯಿಂದ ಬಂದ ಮೌಲ್ವಿಗಳಿಗೆ ಇಲ್ಲಿನ ಬಟ್ಟೆ, ಆಚಾರ, ವಿಚಾರದ ಬಗ್ಗೆ ಗೊತ್ತಿರೋದಿಲ್ಲ. ಅವರು ಇಲ್ಲಿಗೆ ಬಂದು ಬಟ್ಟೆ, ಆಚಾರ ವಿಚಾರದ ಬಗ್ಗೆ ವಿಷ ಬೀಜ ಬಿತ್ತುತ್ತಿದ್ದಾರೆ. ಇದೇ ವಿಷಯ ಹುಬ್ಬಳ್ಳಿ ಗಲಭೆಗೆ ಕಾರಣವಾಗಿದೆ. ಹೀಗಾಗಿ ಹೊರಗಡೆಯಿಂದ ಬಂದ ಮೌಲ್ವಿಗಳ ಬಗ್ಗೆ ವಿಚಾರಣೆ ನಡೆಸಿ ಎಂದು ಗೃಹ ಸಚಿವರಿಗೆ ನಾನು ಸಲಹೆ ನೀಡಿದ್ದೇನೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/04/2022 02:54 pm