ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬೆಲ್ಲದ್‌ಗೆ ತಮಟಗಾರ ತಿರುಗೇಟು

ಧಾರವಾಡ: ಹಿಂದೂ ದೇವಸ್ಥಾನದ ಆವರಣದಲ್ಲಿ ಮುಸ್ಲಿಮರು ಗಡ್ಡಾ, ಟೋಪಿ, ಮೀಸೆ ಬೋಳಿಸಿಕೊಂಡು ಕುಳಿತಿರುತ್ತಾರೆ. ಅವರನ್ನು ನೋಡಿದರೆ ಹಿಂದೂ ಭಕ್ತರಿಗೆ ಏನು ಎನಿಸುತ್ತದೆ ಎಂಬ ಶಾಸಕ ಅರವಿಂದ ಬೆಲ್ಲದ ಹೇಳಿಕೆಗೆ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಲ್ಲದ ಅವರೇ ಕೊರೊನಾ ಸಂದರ್ಭದಲ್ಲಿ ಅನೇಕ ಜನ ಸತ್ತರು. ಅವರ ಅಂತ್ಯ ಸಂಸ್ಕಾರವನ್ನು ಗಡ್ಡ, ಮೀಸೆ ಬೋಳಿಸಿದವರು, ಜುಬ್ಬಾ ಹಾಕಿಕೊಂಡರೇ ಶಾಸ್ತ್ರೋಕ್ತವಾಗಿ ಮಾಡಿದ್ದಾರೆ. ಆಗ ಈ ಮಾತನ್ನು ಏಕೆ ಹೇಳಲಿಲ್ಲ. ಸತ್ತವರ ಮುಖವನ್ನೂ ನಿಮಗೆ ನೋಡಲು ಆಗಲಿಲ್ಲ. ಆಗ ಅಂತ್ಯ ಸಂಸ್ಕಾರ ಮಾಡಿದವರು ನಾವೇ ಎಂದು ತಿರುಗೇಟು ನೀಡಿದ್ದಾರೆ.

ನಿಮ್ಮ ಶೋ ರೂಮ್‌ ಮುಂದೆ ಮುಸ್ಲಿಂರಿಗೆ ಪ್ರವೇಶ ಇಲ್ಲ ಎಂದು ಬೋರ್ಡ್ ಹಾಕಿ ನೋಡೋಣ. ಎಲ್ಲ ಅಂಗಡಿಗಳ ಮುಂದೆ ತಾಕತ್ತಿದ್ದರೆ, ಮುಸ್ಲಿಂರು ವ್ಯಾಪಾರಕ್ಕೆ ಬರಬೇಡಿ ಎಂದು ಬೋರ್ಡ್ ಹಾಕಿ ನೋಡೋಣ. ಮೊದಲು ಜುಬ್ಬಾ, ಟೋಪಿ ಹಾಕಿದವರನ್ನು ಕಂಡರೆ ಕೈ ಮುಗಿಯುತ್ತಿದ್ದರು. ಈ ಹಿಂದೂ ಸಂಘಟನೆಗಳು ಇದನ್ನು ಹಾಳು ಮಾಡಿವೆ ಎಂದು ಇಸ್ಮಾಯಿಲ್ ತೀವ್ರ ವಾಗ್ದಾಳಿ ನಡೆಸಿದರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

12/04/2022 10:04 am

Cinque Terre

121.66 K

Cinque Terre

78

ಸಂಬಂಧಿತ ಸುದ್ದಿ