ಧಾರವಾಡ: ಪ್ರಮೋದ ಮುತಾಲಿಕ್ ಒಂದು ಧರ್ಮವನ್ನು ಗುತ್ತಿಗೆ ಪಡೆದವರಂತೆ ಮಾತನಾಡುತ್ತಿದ್ದಾರೆ. ಅವರು ಭಯೋತ್ಪಾದಕರಂತೆ ವರ್ತಿಸುವುದು ಸರಿಯಲ್ಲ ಎಂದು ಜಾಗೃತ ನಾಗರಿಕ ವೇದಿಕೆ ಮುಖಂಡ ಎಚ್.ಜಿ.ದೇಸಾಯಿ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ, ಸೌಹಾರ್ಧತೆ ಕದಡುವ ಕೆಲಸವಾಗುತ್ತಿದೆ. ಹಿಜಾಬ್ ಆಯ್ತು, ಮುಸ್ಲಿಂರು ಜಾತ್ರೆಗಳಲ್ಲಿ ವ್ಯಾಪಾರ ಮಾಡಬಾರದು ಎಂಬ ವಿಷಯವಾಯ್ತು, ಈಗ ಮುಸ್ಲಿಂ ಅಂಗಡಿಗಳ ಮೇಲೆ ದಾಳಿ ನಡೆಸುವ ಕೆಲಸವಾಗುತ್ತಿದೆ. ಆಳುವ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಕ್ರಿಯೆಗೆ ಪ್ರತಿಕ್ರಿಯೆ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದರು.
ದೇಶಕ್ಕಾಗಿ ಒಂದೇ ಸಮಾಜದವರು ಹೋರಾಟ ಮಾಡಿಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತ ಸಮಾಜದವರೂ ಹೋರಾಟ ಮಾಡಿದ್ದಾರೆ. ಈ ರೀತಿ ಧರ್ಮ, ಧರ್ಮಗಳ ಮಧ್ಯೆ ಭಿನ್ನಾಭಿಪ್ರಾಯ ಬಂದಾಗ ನಿಜವಾದ ದೇಶಭಕ್ತರಲ್ಲಿ ವೈಮನಸ್ಸು ಉಂಟಾಗುತ್ತದೆ. ನೈತಿಕ ಪೊಲೀಸಗಿರಿ ಮಾಡುವವರ ಮೇಲೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/04/2022 01:36 pm