ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಸಹಾಯಕ ಉಪನ್ಯಾಸಕರು ಹಾಗೂ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಮಾಡಿ, ಹುದ್ದೆಯ ಪದನಾಮ ಮತ್ತು ಸೇವಾ ಭದ್ರತೆ ನೀಡುವಂತೆ ಆಗ್ರಹಿಸಿ ಸಹಾಯಕ ಉಪನ್ಯಾಸಕರ ಹಾಗೂ ಅತಿಥಿ ಉಪನ್ಯಾಸಕರ ಸಂಘದವರು ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.
ಸಹಾಯಕ ಉಪನ್ಯಾಸಕರ ಹಾಗೂ ಅತಿಥಿ ಉಪನ್ಯಾಸಕರುಗಳ ಹುದ್ದೆಯ ಪದನಾಮ ಬದಲಾವಣೆ ಮಾಡಬೇಕು ಎಂದು ಈ ಹಿಂದೆ ಹಲವು ಬಾರಿ ಮೌಖಿಕವಾಗಿ ಹಾಗೂ ಲಿಖಿತವಾಗಿ ಮನವಿ ಮಾಡಲಾಗಿದೆ. ಈಗಾಗಲೇ ರಾಜ್ಯದ ವಿಶ್ವವಿದ್ಯಾಲಯಗಳಾದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ ಹಾಗೂ ಬೆಂಗಳೂರು ವಿಶ್ವವಿದ್ಯಾಲಯಗಳು, ಪದನಾಮ ಬದಲಾವಣೆ ಮಾಡಿವೆ. ಇದೇ ರೀತಿಯಾಗಿ ನಮ್ಮ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕರ ಬದಲಾಗಿ ಸಹಾಯಕ ಪ್ರಾಧ್ಯಾಪಕರು ಎಂದು ಪದನಾಮವನ್ನು ನೀಡಬೇಕು ಹಾಗೂ ಅತಿಥಿ ಉಪನ್ಯಾಸಕರಿಗೂ ಅವರ ಕಾರ್ಯಾಚಾರಕ್ಕನುಗುಣವಾಗಿ ಪದನಾಮ ನೀಡಬೇಕು.
ಸಹಾಯಕ ಉಪನ್ಯಾಸಕರ ಹಾಗೂ ಅತಿಥಿ ಉಪನ್ಯಾಸಕರುಗಳಿಗೆ ಟಿಡಿಎಸ್ ಕಡಿತಗೊಳಿಸಿರುವುದರ ಬಗ್ಗೆ Form-16A ನಲ್ಲಿ ಮರುಪಾವತಿ ಮಾಡುವ ಕುರಿತು ಸ್ಪಷ್ಟೀಕರಣ ನೀಡಬೇಕು ಈ ಎಲ್ಲ ಬೇಡಿಕೆಗಳ ಕುರಿತು ಕೂಡಲೇ ಚರ್ಚೆ ನಡೆಸಿ, ಈಡೇರಿಸಬೇಕು ಇಲ್ಲದೇ ಹೋದರೆ ಅನಿರ್ಧಿಷ್ಟಾವಧಿ ಧರಣಿ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
Kshetra Samachara
29/03/2022 03:20 pm