ಧಾರವಾಡ: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು, ಬಿಜೆಪಿ ಸೇರ್ಪಡೆ ಆಗ್ತಿರುವುದು ವದಂತಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಡ್ಡಾರಿಗೆ ಬಿಜೆಪಿ ಸ್ಥಳೀಯ ಮುಖಂಡರ ದೂರು ವಿಚಾರವಾಗಿ, ಯಾರು, ಯಾಕೆ, ದೂರು ಕೊಟ್ಟಿದ್ದಾರೆ ಎಂಬುವುದು ನಂಗೇ ಗೊತ್ತಿಲ್ಲ. ಬಸವರಾಜ ಹೊರಟ್ಟಿ ಅವರು ಬಿಜೆಪಿಗೆ ಬರ್ತಿನಿ ಅಂತಾ ನಂಗೇ ಹೇಳಿಲ್ಲ. "ಹಾಲು ಇಲ್ಲ, ಬಟ್ಟಲು ಇಲ್ಲ ಗುಟಕ್, ಗುಟಕ್ ಅಂದ್ರು ಅಂತೆ" ಹಾಗೆ ನಡೆದಿದೆ ಇದು ಎಂದು ಹೇಳುತ್ತಲೇ ನಗುತ್ತಲೇ ಜೋಶಿ ಅವರು ಹೊರಟು ಹೋದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/03/2022 03:04 pm