ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಮಾಯಕರ ಮೇಲೆ ಕ್ರಮ‌ ಕೈಗೊಂಡು ಬಲಿಪಶು ಮಾಡೋದು ಬೇಡ: ಹೊರಟ್ಟಿ

ಧಾರವಾಡ: ಜನವರಿ 25ಕ್ಕೆ ನನ್ನ ಮೇಲೆ ದೂರು ದಾಖಲಾಗಿತ್ತು. ಆದರೆ ಈ ವಿಷಯ ದೀರ್ಘಕ್ಕೆ ತೆಗೆದುಕೊಂಡು ಹೋಗಬಾರದು ಎಂದು ನಾನು ಸುಮ್ಮನಿದ್ದೆ. ಎಸ್ಪಿ ಕೂಡ ನನ್ನ ಬಳಿ ಬಂದು ಕ್ಷಮೆ ಕೇಳಿದ್ದರು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ದೂರು ದಾಖಲಿಸಿದ್ದರು. ನಾನು ಜ. 25 ರಂದು ಧಾರವಾಡದಲ್ಲಿ ಇರಲಿಲ್ಲ. ಈ ಹಿಂದೆ ನನ್ನ ಮೇಲೆ ಎಸ್ಸಿ ಎಸ್ಟಿ ದೂರು‌ ಸಹ ಇಲ್ಲ. ಯಾರು ತಪ್ಪು ಮಾಡಿದರೂ ಅವರಿಗೆ ಶಿಕ್ಷೆಯಾಗಬೇಕು. ನಾನು ಬೆಂಗಳೂರಿನಲ್ಲಿ ಇದ್ದರೂ ನನ್ನ ಮೇಲೆ ಅಟ್ರಾಸಿಟಿ ದೂರು ಕೊಟ್ಟಿದ್ದರು. ತಪ್ಪು ಮಾಡಿದವರ ಮೇಲೆ ಕ್ರಮ ಆಗಲಿ ಎಂದು ಹೊರಟ್ಟಿ ಹೇಳಿದ್ದಾರೆ.

ಸದನದಲ್ಲಿ ‌ಬಜೆಟ್ ವಿಚಾರದಲ್ಲಿ ಮಾತನಾಡುವಾಗ ಕೆಲ ಸದಸ್ಯರು ಈ ವಿಚಾರ ಪ್ರಸ್ತಾಪಿಸಿದರು. ನಾನು ಸದನದಲ್ಲಿದ್ದೆ. ನನ್ನ ಸ್ಥಾನದಲ್ಲಿ ಬೇರೆಯವರನ್ನು ಕೂರಿಸಿ ವಾಪಸ್ಸಾಗಿದ್ದೆ. ತಪ್ಪು ಮಾಡದವರ ಮೇಲೆ ಕ್ರಮ‌ ಕೈಗೊಂಡ ಬಲಿಪಶು ಮಾಡೋದು ಬೇಡ ಸಣ್ಣವರನ್ನು ಇದರಲ್ಲಿ ಬಲಿ‌ ಕೊಡೋದು ಸರಿಯಲ್ಲ. ಹಿರಿಯ ಅಧಿಕಾರಿ ಹೇಳಿದ್ರಂತೆ ಸಣ್ಣ ಅಧಿಕಾರಿಗಳ ಮೇಲೆ ಕ್ರಮ ಸರಿಯಲ್ಲ. ಪೊಲೀಸ್ ಮಹಾ ನಿರ್ದೇಶಕರ ಜೊತೆ ಮಾತನಾಡುತ್ತೇನೆ. ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ವಿ.ಪ ಸಭಾಪತಿ ಹೊರಟ್ಟಿ ಹೇಳಿದ್ದಾರೆ..

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

13/03/2022 04:07 pm

Cinque Terre

54.31 K

Cinque Terre

0

ಸಂಬಂಧಿತ ಸುದ್ದಿ