ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿದ್ಯುತ್ ಕಾಮಗಾರಿ ದರ ಪಟ್ಟಿಯನ್ನು ಪರಿಷ್ಕರಿಸಿ

ಧಾರವಾಡ: ವಿದ್ಯುತ್ ಸರಬರಾಜು ಕಂಪನಿಗಳ ವಿದ್ಯುತ್ ಕಾಮಗಾರಿ ದರ ಪಟ್ಟಿಯನ್ನು ಪರಿಷ್ಕರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈಗಿರುವ ದರಪಟ್ಟಿಯಲ್ಲಿನ ಬೆಲೆಯು 2018-19ನೇ ಸಾಲಿನದ್ದಾಗಿದೆ. ಇಂದಿನ ಬೆಲೆಗೂ ಅಂದಿನ ಬೆಲೆಗೂ ಶೇ. 60ರಿಂದ 80 ರಷ್ಟು ಹೆಚ್ಚಳವಾಗುತ್ತದೆ. ಇಂದಿನ ಮಾರುಕಟ್ಟೆ ದರವನ್ನು ಪರಿಗಣನೆ ಮಾಡದೇ ಇಲ್ಲಿಯವರೆಗೂ ದರಪಟ್ಟಿಯಲ್ಲಿ ಯಾವುದೇ ಪರಿಷ್ಕರಣೆ ಮಾಡಿಲ್ಲ. ಈಗಾಗಲೇ ಕಾಮಗಾರಿಯನ್ನು ಹೊಂದಿರುವ ಮತ್ತು ಮುಂದಿನ ಕಾಮಗಾರಿಗಳಿಗೆ ಟೆಂಡರ್ ಸಲ್ಲಿಸುವಾಗ ತೊಂದರೆಗಳು ಎದುರಾಗುತ್ತಿವೆ. ಕೂಡಲೇ ದರ ಪರಿಷ್ಕರಣೆ ಮಾಡಬೇಕು ಎಂದು ವಿಜಯಕುಮಾರ ಗುಡ್ಡದ ಆಗ್ರಹಿಸಿದರು.

ಇಷ್ಟು ಸಮಸ್ಯೆಗಳಿದ್ದರೂ ಯಾರೂ ಕೂಡ ಗಮನಹರಿಸುತ್ತಿಲ್ಲ. ಕೂಡಲೇ ದರಪಟ್ಟಿಗಳ ವ್ಯತ್ಯಾಸವನ್ನು ಪರಿಷ್ಕರಿಸಬೇಕು. ಮಾರುಕಟ್ಟೆ ದರವನ್ನು ಪರಿಗಣಿಸಿ ಪರಿಷ್ಕರಣೆ ಮಾಡದಿದ್ದರೆ ಗುತ್ತಿಗೆದಾರರು ಮುಂದಿನ ಯಾವುದೇ ಕಾಮಗಾರಿಗಳನ್ನು ಮಾಡುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

Edited By : Nagesh Gaonkar
Kshetra Samachara

Kshetra Samachara

28/02/2022 06:00 pm

Cinque Terre

16.58 K

Cinque Terre

0

ಸಂಬಂಧಿತ ಸುದ್ದಿ