ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಾಂಗ್ರೆಸ್‌ನವರಿಗೆ ಚುನಾವಣೆ ಬಂದಾಗಲಷ್ಟೇ ಹೋರಾಟ ನೆನಪಾಗುತ್ತೆ: ಹಾಲಪ್ಪ ಆಚಾರ್

ಹುಬ್ಬಳ್ಳಿ: ಚುನಾವಣೆ ಹತ್ತಿರ ಬಂದಾಗಷ್ಟೇ ಕಾಂಗ್ರೆಸ್‌ನವರಿಗೆ ಹೋರಾಟಗಳು ನೆನಪಾಗುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮದಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಚುನಾವಣೆ ಬಂದಾಗಲೊಮ್ಮೆ ಇಂತಹ ಹೋರಾಟಗಳನ್ನು ಆರಂಭಿಸುತ್ತಾರೆ. ಅವರದ್ದೇ ಅಧಿಕಾರ ಇದ್ದಾಗ ಏನೂ ಮಾಡಲಿಲ್ಲ. ಜನರನ್ನು ಆಕರ್ಷಿಸಲು ಇಂತಹ ಪ್ರಯತ್ನ ಮಾಡುತ್ತಿದ್ದಾರೆ‌. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಅವರಿಗೆ ತಕ್ಕ ಉತ್ತರ ಕೊಡಲಿದ್ದಾರೆ. 2013ರ ಚುನಾವಣೆ ಮುನ್ನ ಉತ್ತರ ಕರ್ನಾಟಕದ ವಿಷಯಗಳನ್ನು ಇಟ್ಟುಕೊಂಡು ರ‌್ಯಾಲಿ ಮಾಡಿದ್ದರು. ಈಗ ಈ ಕಡೆ ಅವರದ್ದು ಏನು ನಡೆಯುತ್ತಿಲ್ಲ ಹೀಗಾಗಿ ಮೇಕೆದಾಟು ಹಿಡಿದುಕೊಂಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಈ ಹೋರಾಟ ಅಷ್ಟೇ ಸಚಿವ ಹಾಲಪ್ಪ ಟೀಕಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ಮೇಲೆ ಅಧಿವೇಶನದಲ್ಲಿ ಭಾಗಿಯಾಗಿದ್ದೆ. ಆದ್ದರಿಂದ ಧಾರವಾಡಕ್ಕೆ ಬಂದಿರಲಿಲ್ಲ. ಈಗ ಮತ್ತೆ ಇಲ್ಲಿನ ಜನರ ಸಂಪರ್ಕದಲ್ಲಿ ಇರುವುದಾಗಿ ಹಾಲಪ್ಪ ಆಚಾರ್ ಹೇಳಿದ್ದಾರೆ.

Edited By : Shivu K
Kshetra Samachara

Kshetra Samachara

28/02/2022 12:13 pm

Cinque Terre

23.3 K

Cinque Terre

4

ಸಂಬಂಧಿತ ಸುದ್ದಿ