ಹುಬ್ಬಳ್ಳಿ: ಹಿಜಾಬ್ ಬಗ್ಗೆ ನಾನು ಮಾತನಾಡುತ್ತೇನೆ. ನಾನು ಯಾರಿಗೂ ಕ್ಷಮೆ ಕೇಳುವುದಿಲ್ಲ. ನಾನು ಯಾಕೆ ಕ್ಷಮೆ ಕೇಳಬೇಕು ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಕೌಂಟರ್ ಕೊಟ್ಟಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ನಾನು ಹಿಜಾಬ್ ಬಗ್ಗೆ ಮಾತನಾಡುವವನೇ. ಕ್ಷಮೆ ಕೇಳುವಂತ ಹೇಳಿಕೆ ಏನು ನೀಡಿರುವೆ? ನಾನು ಹಿಜಾಬ್ ಹಾಕಬೇಕು ಅಂತ ಹೇಳಿದ್ದೇನೆ. ಮಾಧ್ಯಮದವರು ಅದನ್ನು ತಿರುಚಿದ್ದಾರೆ' ಎಂದರು.
ಹೆಲ್ಮೆಟ್ ರೀತಿ ಹಿಜಾಬ್ ಹಾಕಬೇಕು. ಹೆಲ್ಮೆಟ್ ಹೇಗೆ ಸೇಫ್ಟಿ ಕೊಡುತ್ತದೆಯೋ ಹಾಗೇ ಹಿಜಾಬ್ ಕೂಡಾ ರಕ್ಷಣೆ ನೀಡುತ್ತದೆ. ಬಹಳ ಜನ ಹಿಜಾಬ್ ಹಾಕುವುದಿಲ್ಲ. ಹಾಗೇ ಹೆಲ್ಮೆಟ್ ಕೂಡ ಕಡ್ಡಾಯವಿದ್ದರೂ ಹಾಕುವುದಿಲ್ಲ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/02/2022 07:58 pm