ಹುಬ್ಬಳ್ಳಿ: ನಾವು ಕೈ ಹಾಕಿದ್ರೆ ಕರ್ನಾಟಕದ ನಿಧಿಗೆ ಕೈ ಹಾಕ್ತೇವಿ. ಚಿಲ್ರೆ ಪಲ್ರೆಗೆಲ್ಲ ಕೈ ಹಾಕಲ್ಲ. ನೋಡೋಣ ಎಲೆಕ್ಷನ್ಗೆ ಇನ್ನೂ ಒಂದು ವರ್ಷ ಮೂರು ತಿಂಗಳು ಬಾಕಿ ಇದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾವು ತಾಲ್ಲೂಕು ಪಂಚಾಯತ, ಅಥವಾ ಜಿಲ್ಲಾ ಪಂಚಾಯತಗೆ ಕೈ ಹಾಕಲ್ಲ ರಾಜ್ಯದ ಅಧಿಕಾರ ಗದ್ದುಗೆಗೆ ಕೈ ಹಾಕ್ತೀವಿ. ನಮ್ಮ ಮುಂದಿನ ನಿರ್ಧಾರವನ್ನು ಶೀಘ್ರದಲ್ಲಿ ಪ್ರಕಟಿಸುತ್ತೇನೆ. ಅಭಿಮಾನಿಗಳ ಸಭೆಯಲ್ಲಿ ಎಲ್ಲರೂ ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ಬೆಂಬಲಿಸುವುದಾಗಿ ಹೇಳಿದ್ದಾರೆ ಎಂದು ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ತಿಳಿಸಿದರು.
Kshetra Samachara
14/02/2022 11:36 am