ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಜಾತ್ರೆಗಳಿಂದ ಸಮಾನತೆ ಸಾಧ್ಯ: ಶಾಸಕ ಸಿ.ಎಂ.ನಿಂಬಣ್ಣವರ

ಕಲಘಟಗಿ: ಸಮಾಜದಲ್ಲಿ ಜಾತ್ರೆಗಳು ನಡೆಯುತ್ತವೆ. ಎಲ್ಲ ಜನರು ಭೇದ-ಭಾವ ಮರೆತು ಭಾಗವಹಿಸುವುದರಿಂದ ಸಮಾಜದಲ್ಲಿ ಸಮಾನತೆ ಮೂಡಲು ಸಾಧ್ಯವಾಗುತ್ತದೆ ಎಂದು ಶಾಸಕ ಸಿ.ಎಂ.ನಿಂಬಣ್ಣವರ ಮಾತನಾಡಿದರು.

ತಾಲೂಕಿನ ಕಾಮಧೇನು ಗ್ರಾಮದಲ್ಲಿ ಗಾಳೆಮ್ಮದೇವಿ ದೇವಸ್ಥಾನ ಉದ್ಘಾಟನೆ ಮೂರ್ತಿ ಪ್ರತಿಷ್ಠಾಪನೆ ಕಳಸಾರೋಹಣ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಾತ್ರೆ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವುದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ಉಂಟಾಗುತ್ತದೆ. ಸಮಾಜದಲ್ಲಿನ ಮೇಲು ಕೀಳು ಭಾವನೆಗಳು ಅಳಿಸಲು ಸಾಧ್ಯವಾಗುತ್ತದೆ. ಆದ್ದರಿಂದ ನಮ್ಮ ಪೂರ್ವಜರು ಲೋಕಕಲ್ಯಾಣಕ್ಕಾಗಿ ಜಾತ್ರೆಗಳನ್ನು ನಡೆಸುವ ಸಂಪ್ರದಾಯ ಇಟ್ಟುಕೊಂಡಿದ್ದರು. ಗ್ರಾಮದ ಎಲ್ಲರೂ ಜಾತ್ರೆಯುಲ್ಲಿ ಕೊರೊನಾ ನಿಯಮ ಪಾಲಿಸಿ ಹೆಚ್ಚು ಆಡಂಬರದ ವಿಲ್ಲದೆ ಸರಳವಾಗಿ ಜಾತ್ರೆ ಆಚರಿಸಿ ಎಂದರು.

ಈ ಸಂಧರ್ಬದಲ್ಲಿ ಶಿವಪ್ಪ ಶೆಟ್ಟಿ, ರಮೇಶಪ್ಪ ಸೀಗೆಹಳ್ಳಿ, ಶಿವ ಕಲಪ್ಪ ಹುಲಗೂರು, ಶೇಖಪ್ಪ ಹುಲಗೂರು, ಏಗಪ್ಪ ಹುಲಗೂರು ಇದ್ದರು.

Edited By : Manjunath H D
Kshetra Samachara

Kshetra Samachara

09/02/2022 03:30 pm

Cinque Terre

21.76 K

Cinque Terre

0

ಸಂಬಂಧಿತ ಸುದ್ದಿ