ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಏಳು ಕೋಟಿ ರೂಪಾಯಿ ಮೊತ್ತದ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಅಮೃತ

ಧಾರವಾಡ: ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರು ತಮ್ಮ ಕ್ಷೇತ್ರದ ಅಮ್ಮಿನಭಾವಿ ಗ್ರಾಮದಲ್ಲಿ ಬರೋಬ್ಬರಿ 7 ಕೋಟಿ ರೂಪಾಯಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ಅಂದಾಜು 4 ಕೋಟಿ ರೂಪಾಯಿ ಅನುದಾನದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ವತಿಯಿಂದ ಜಲ ಜೀವನ ಮಿಷನ್ ಯೋಜನೆಯಡಿಯಲ್ಲಿ ಅಮ್ಮಿನಭಾವಿ ಗ್ರಾಮದ ಮನೆ ಮನೆಗೆ ಗಂಗೆ ಕಾಮಗಾರಿ, ಅಂದಾಜು 36 ಲಕ್ಷ ರೂಪಾಯಿ ಅನುದಾನದಲ್ಲಿ ಅಂಗನವಾಡಿ ನಂಬರ್ 01 ಮತ್ತು ನಂಬರ್ 05 ಕಟ್ಟಡ ನಿರ್ಮಾಣ ಕಾಮಗಾರಿ, ಅಂದಾಜು 20 ಲಕ್ಷ ರೂಪಾಯಿ ಅನುದಾನದಲ್ಲಿ ಎಸ್‌ಟಿ ಕಾಲೊನಿಯಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಕಾಂಕ್ರೀಟ್ ಗಟಾರ್ ನಿರ್ಮಾಣ ಕಾಮಗಾರಿ, ಅಂದಾಜು 8 ಲಕ್ಷ ರೂಪಾಯಿ ಅನುದಾನದಲ್ಲಿ ಸಮರ್ಥ ರಾಮದಾಸ ಮಠದ ಹತ್ತಿರ ಸಮುದಾಯ ಭವನ ನಿರ್ಮಾಣ, ವಾರ್ಡ ನಂಬರ್ 9 ರಲ್ಲಿ ಅಂದಾಜು 9 ಲಕ್ಷ ಅನುದಾನದಲ್ಲಿ ಗಣಪತಿ ದೇವಸ್ಥಾನ ನಿರ್ಮಾಣ ಕಾಮಗಾರಿ, ಅಂದಾಜು 53 ಲಕ್ಷ ಅನುದಾನದಲ್ಲಿ ಮಲ್ಲಯ್ಯನ ಕೆರೆ ದಾರಿ ಸುಧಾರಣೆ, ಅಂದಾಜು ಮೊತ್ತ 53 ಲಕ್ಷ ಅನುದಾನದಲ್ಲಿ ಗ್ರಾಮದ ನಿಂಗೋಜಿ ರಸ್ತೆ ಸುಧಾರಣೆ ಕಾಮಗಾರಿ, 40 ಲಕ್ಷ ರೂಪಾಯಿ ಅನುದಾನದಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆ ಅಮ್ಮಿನಭಾವಿ ಗ್ರಾಮದ ಜೈನಬಸದಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕರು ಭೂಮಿಪೂಜೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಶಾಸಕರು, ನಾಡಕಚೇರಿ, ಡಾ.ಬಿ.ಆರ್.ಅಂಬೇಡ್ಕರ್ ಭವನ, ರೈತ ಸಂಪರ್ಕ ಕೇಂದ್ರಗಳ ನೂತನ ಕಟ್ಟಡಗಳನ್ನು ಉದ್ಘಾಟಿಸಿದರು.

Edited By : Manjunath H D
Kshetra Samachara

Kshetra Samachara

05/02/2022 08:48 pm

Cinque Terre

24.27 K

Cinque Terre

2

ಸಂಬಂಧಿತ ಸುದ್ದಿ