ಕಲಘಟಗಿ: ರಾಯಚೂರ ಜಿಲ್ಲೆಯ ಮುಖ್ಯ ನಾಯಾಧಿಶರಾದ ಮಲ್ಲಿಕಾರ್ಜುನ ಗೌಡ ಡಾ.ಬಿ.ಆರ್ ಅಂಬೇಡ್ಕರ ಭಾವಚಿತ್ರಕ್ಕೆ ಅವಮಾನ ಎಸಗಿದ್ದನ್ನು ಖಂಡಿಸಿ ಕಲಘಟಗಿ ಪಟ್ಟಣದಲ್ಲಿ ಅಖಿಲ ಕರ್ನಾಟಕ ಆದಿ ಜಾಂಬವ ಸಂಘ (ರಿ) ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಸಂಘಟನೆ ವತಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಜನೇವರಿ 26 ರಂದು ಸಂವಿಧಾನ ಸಮರ್ಪಣೆ ದಿವಸ ಅಂಗವಾಗಿ ಧ್ವಜಾರೋಹಣ ಮಾಡುವ ಸಂಧರ್ಬದಲ್ಲಿ ಅಂಬೇಡ್ಕರ ಭಾವಚಿತ್ರವನ್ನು ತಗೆಯಿಸಿ ಧ್ವಜಾರೋಹಣ ಮಾಡಿದ್ದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ಮಾಡಲಾಯಿತು ಪ್ರತಿಭಟನಾ ಮೆರವಣಿಗೆಯನ್ನು ಬಮ್ಮಿಗಟ್ಟಿ ಕ್ರಾಸನಿಂದ ಪ್ರಾರಂಬಿಸಿ ತಾಲೂಕಾ ದಂಡಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಯಿಸಿ ದಂಡಾದಿಕಾರಿ ಯಲ್ಲಪ್ಪ ಗೋಣೆನ್ನವರರಿಗೆ ನ್ಯಾಯಮೂರ್ತಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿ ನೀಡಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕಾ ಸಂಚಾಲಕ ಮಾತನಾಡಿ ರಾಜ್ಯದಲ್ಲಿ ಶಾಂತಿ ಕದಡುವ ಕ್ರಮ ಇದಾಗಿದ್ದು ದೇಶಕ್ಕಾಗಿ ಅಂಬೇಡ್ಕರ ಕೂಡುಗೆ ಅಪಾರವಾಗಿದ್ದು ದೇಶದ ಸಂವಿದಾನ ರಚಿಸುವಲ್ಲಿ ಪ್ರತಿಯೊಂದು ಜನತೆಗೆ ನ್ಯಾಯ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ದೇಶದ ಪ್ರಜ್ಞಾವಂತ ಪ್ರಜೆಯಾದ ನ್ಯಾಯಮೂರ್ತಿಗಳ ಈ ರೀತಿ ವರ್ತನೆ ಸರಿಯಲ್ಲ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿಭಟನಾ ಸಮಯದಲ್ಲಿ ಅಖಿಲ ಕರ್ನಾಟಕ ಆದಿ ಜಾಂಬವ ಸಂಘ (ರಿ) ಯುವ ಸಮಿತಿ ತಾಲೂಕಾ ಅಧ್ಯಕ್ಷ ಬಸವರಾಜ ಮಾದರ, ಕರ್ನಾಟಕ ದಲಿತ ಸಂಘರ್ಷ ಸಮೀತಿ ನಗರ ಘಟಕದ ಸಂಚಾಲಕ ಯಲ್ಲಪ್ಪ .ಮೇಲಿನಮನಿ, ಕರ್ನಾಟಕ ರಾಜ್ಯ ಆದಿ ಜಾಂಬವ (ಮಾದಿಗ) ಸಂಘ (ರಿ) ಕಲಘಟಗಿ ಅಧ್ಯಕ್ಷ ಬಸವರಾಜ ಕಟ್ಟಿಮನಿ, ಗೋಪಾಲ ದೊಡಮನಿ,ಶರೀಫ ಹರಿಜನ, ದ್ಯಾಮಪ್ಪ ಮಾದರ,ಫಕ್ಕಿರೇಶ ಮಾದರ,ಪ್ರಕಾಶ ಗುಂಡಮ್ಮನವರ, ಬಸವರಾಜ ವಾಲ್ಮಿಕಿ, ಯಲ್ಲಪ್ಪ ಮಾದರ,ಪೀರಸಾಬ ಕಮಡೊಳ್ಳಿ, ಚಂದ್ರು ಮಾದರ,ಸತೀಶ ಮಾದರ, ಕರಿಯಪ್ಪ ಮಾದರ,ಯಲ್ಲಪ್ಪ ಹೊಸಮನಿ, ನಾಗರಾಜ ಹೊಸಮನಿ,ಹನಮಂತ ಹರಿಜನ,ಚಂದ್ರು ಮಾದರ,ಮಂಜು ಬೇಗೂರ,ರಾಯಪ್ಪ ಹರಿಜನ, ಇದ್ದರು.
ಚಿತ್ರ ಇವೆ04ಕೆ.ಎಲ್.ಜಿ1 ಕಲಘಟಗಿ ಪಟ್ಟಣದಲ್ಲಿ ಅಖಿಲ ಕರ್ನಾಟಕ ಆದಿ ಜಾಂಬವ ಸಂಘ (ರಿ) ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಸಂಘಟನೆ ವತಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
04ಕೆ.ಎಲ್.ಜಿ1ಎ ಕಲಘಟಗಿ ಪಟ್ಟಣದ ಬಮ್ಮಿಗಟ್ಟಿ ಕ್ರಾಸನಿಂದ ಪ್ರಾರಂಬಿಸಿ ತಾಲೂಕಾ ದಂಡಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಯಿಸಿ ದಂಡಾದಿಕಾರಿ ಯಲ್ಲಪ್ಪ ಗೋಣೆನ್ನವರರಿಗೆ ನ್ಯಾಯಮೂರ್ತಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿ ನೀಡಲಾಯಿತು.
Kshetra Samachara
04/02/2022 09:30 pm