ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಶೆಟ್ಟರ್ ಮೇಯರ್, ಬೆಲ್ಲದ ಉಪಮೇಯರ್.. ಕಾಂಗ್ರೆಸ್ ಕಾರ್ಯಕರ್ತರ ನಾಮಕರಣ

ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆದು ಹಲವು ತಿಂಗಳು ಕಳೆದರೂ ಪಾಲಿಕೆ ಸದಸ್ಯರಿಗೆ ಅಧಿಕಾರ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು ಧಾರವಾಡ ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರಿಗೆ ಮೇಯರ್ ಹಾಗೂ ಶಾಸಕ ಅರವಿಂದ ಬೆಲ್ಲದ ಅವರಿಗೆ ಉಪಮೇಯರ್ ಎಂಬ ನಾಮಕರಣ ಮಾಡಿದ ಪ್ರತಿಭಟನಾಕಾರರು, ಜಗದೀಶ ಶೆಟ್ಟರ್ ಹಾಗೂ ಬೆಲ್ಲದ ಅವರ ಮುಖವಾಡ ಧರಿಸಿದ ವ್ಯಕ್ತಿಗಳನ್ನು ಖುರ್ಚಿ ಮೇಲೆ ಕುಳ್ಳಿರಿಸಿ ಸನ್ಮಾನ ಮಾಡುವ ಮೂಲಕ ಅಣಕು ಪ್ರದರ್ಶನ ಮಾಡಿದರು.

ಪಾಲಿಕೆ ಚುನಾವಣೆ ಮುಗಿದು ಸದಸ್ಯರ ಆಯ್ಕೆಯೂ ಆಗಿದೆ. ಹಲವು ತಿಂಗಳು ಕಳೆದರೂ ಪಾಲಿಕೆ ಸದಸ್ಯರಿಗೆ ಇದುವರೆಗೂ ಅಧಿಕಾರ ಸಿಕ್ಕಿಲ್ಲ. ಹೀಗಾಗಿ ಮತದಾರರು ಪಾಲಿಕೆ ಸದಸ್ಯರನ್ನು ಕೆಲಸ ಮಾಡಿಸಿಕೊಡುವಂತೆ ದಂಬಾಲು ಬಿದ್ದಿದ್ದಾರೆ. ಕೆಲವೇ ದಿನಗಳಲ್ಲಿ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿ, ಎರಡೂ ಸ್ಥಾನವನ್ನು ಆಯ್ಕೆ ಮಾಡಬೇಕು ಜೊತೆಗೆ ಪಾಲಿಕೆ ಸದಸ್ಯರಿಗೆ ಕೂಡಲೇ ಅಧಿಕಾರ ನೀಡಬೇಕು ಎಂದು ಒತ್ತಾಯಿಸಲಾಯಿತು.

ಬಿಜೆಪಿಯು ಎಂಎಲ್‌ಸಿ ಚುನಾವಣೆಗೆ ಮತ ಹಾಕಲು ಪಾಲಿಕೆ ಸದಸ್ಯರಿಗೆ ಅಧಿಕಾರ ನೀಡಿದೆ. ಆದರೆ, ಪಾಲಿಕೆಯಲ್ಲಿ ಸದಸ್ಯರಿಗೆ ಇನ್ನೂ ಅಧಿಕಾರ ನೀಡಿಲ್ಲ. ಶೀಘ್ರಗತಿಯಲ್ಲಿ ಮೇಯರ್, ಉಪಮೇಯರ್ ಆಯ್ಕೆಯಾಗದೇ ಇದ್ದಲ್ಲಿ ಧಾರವಾಡದಿಂದ ಹುಬ್ಬಳ್ಳಿವರೆಗೆ ಪಾದಯಾತ್ರೆ ಮಾಡಲಾಗುವುದು ಎಂದು ಕಾಂಗ್ರೆಸ್ ಮುಖಂಡರು ಎಚ್ಚರಿಸಿದರು.

Edited By : Manjunath H D
Kshetra Samachara

Kshetra Samachara

25/01/2022 01:48 pm

Cinque Terre

37.97 K

Cinque Terre

9

ಸಂಬಂಧಿತ ಸುದ್ದಿ