ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಚಾರಿ ವಿಜ್ಞಾನ ಪ್ರಯೋಗಾಲಯಕ್ಕೆ ಶಾಸಕ ಅರವಿಂದ್ ಬೆಲ್ಲದ್ ಚಾಲನೆ

ಹುಬ್ಬಳ್ಳಿ: ಏಕಸ್ ಪ್ರತಿಷ್ಠಾನ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಇವರ ಸಹಯೋಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಟಿಗಟ್ಟಿಯಲ್ಲಿ ಸಂಚಾರಿ ವಿಜ್ಞಾನ ಪ್ರಯೋಗಾಲಯದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಮಾತನಾಡಿ, ಸಂಚಾರಿ ವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿ ವಿಜ್ಞಾನ ಎನ್ನುವುದು ವಾಸ್ತವ, ಸತ್ಯ,ನೈಜತೆಯ ಅನಾವರಣ ಮಾಡುವುದಾಗಿದೆ. ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನವು ದೇಶಾದ್ಯಂತ ಅನೇಕ ವೈಜ್ಞಾನಿಕ ಕಾರ್ಯಕ್ರಮಗಳ ಮೂಲಕ ಶಿಕ್ಷಕರಲ್ಲಿ, ವಿದ್ಯಾರ್ಥಿಗಳಲ್ಲಿ ಮತ್ತು ಜನಸಾಮಾನ್ಯರಲ್ಲಿ ವೈಜ್ಞಾನಿಕ ಪರಿಕಲ್ಪನೆ ಮೂಡಿಸುತ್ತಿರುವುದು ಶ್ಲಾಘನೀಯವಾದುದು ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಅಗಸ್ತ್ಯ ಪ್ರತಿಷ್ಠಾನದ ಪ್ರಾದೇಶಿಕ ಮುಖ್ಯಸ್ಥೆ ಡಾಕ್ಟರ್ ಬವಿತಾ, ಧಾರವಾಡ ಶಹರದ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ್ ಪದಕಿ, ಏಕಸ್ ಕಂಪನಿಯ ಬಸವರಾಜ್, ಉದಯ ಸಾನಿಕೊಪ್ಪ, ಧವಲ್ ಚಿಟ್ನಿಸ್, ಅಗಸ್ತ್ಯ ಪ್ರತಿಷ್ಠಾನದ ಶಿವಾನಂದ ಚಲವಾದಿ, ಶಾಲೆಯ ಅಧ್ಯಕ್ಷ ಚನ್ನಬಸಪ್ಪ ನವಲೂರು, ಪ್ರಧಾನ ಗುರುಮಾತೆ ರಾಜೇಶ್ವರಿ ಕೋರಿ, ಶಿಕ್ಷಕ ವೃಂದ, ಅಗಸ್ತ್ಯ ಸಿಬ್ಬಂದಿ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

13/01/2022 10:35 am

Cinque Terre

23.78 K

Cinque Terre

0

ಸಂಬಂಧಿತ ಸುದ್ದಿ