ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಾಂಗ್ರೆಸ್ ವಿರುದ್ಧ ಶೆಟ್ಟರ್ ಕಿಡಿ: ಜನರ ಹಿತಾಸಕ್ತಿ ಬೇಕಿಲ್ಲ ವೋಟ ಬ್ಯಾಂಕ್ ಪ್ರಚಾರ ಬೇಕು...!

ಹುಬ್ಬಳ್ಳಿ: ನಮ್ಮ ಸರ್ಕಾರ ಅಸಮರ್ಥವಿಲ್ಲ. ಮುಖ್ಯಂತ್ರಿಗಳು ಸೂಕ್ತ‌ ನಿರ್ಧಾರ ತೆಗೆದುಕೊಳ್ತಾರೆ. ಕಾಂಗ್ರೆಸ್ ಹಠಕ್ಕೆ ಬಿದ್ದು ಪಾದಾಯತ್ರೆ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ವಿರುದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು,ಯಾತ್ರೆಯನ್ನು ತಡಿಯೋಕೆ ನಾವ್ ಹೋಗುವುದಿಲ್ಲ. ಸುಮನ್ನೆ ಗೊಂದಲ ಅಗಬಾರದು ಅಂತ ಬಿಟ್ಟಿದ್ದಿವಿ. ಸಾವಿರಾರು ಜನರನ್ನು ಕರೆದುಕೊಂಡು ಹೋಗಿ ಮಾಡೇ ಮಾಡ್ತಿವಿ ಎನ್ನೋದು ಎಷ್ಟು ಸರಿ‌.

ಜನಸಾಮಾನ್ಯರಿಗೆ ದಂಡ ಹಾಕ್ತಿವಿ. ನೀವೇ ಹೀಗೇ ಮಾಡಿದ್ರೆ ಹೇಗೆ ಎಂದರು.

ನೀವು ಹಠಕ್ಕೆ ಬಿದ್ದು ಪಾದಯಾತ್ರೆ ಮಾಡುತ್ತಿರುವುದು ಏಕೆ ಎನ್ನುವುದು ಅರ್ಥ ಆಗ್ತಿಲ್ಲ. ನಿಮಗೆ ನಾಡಿನ ಹಿತಾಶಕ್ತಿ ಬಗ್ಗೆ ಕಿಂಚಿತ್ತು ಕಾಳಜಿಲ್ಲ. ಪ್ರಚಾರ,ವೋಟ್ ಬ್ಯಾಂಕ್ ಗಾಗಿ ಹೋರಾಟ ಮಾಡುತ್ತಿದ್ದೀರಾ. ಪಾದಾಯತ್ರೆ ಬಿಟ್ಟು ಮಾತುಕತೆಗೆ ಬನ್ನಿ. ರಚನಾತ್ಮಕ ಸಲಹೆ ನೀಡಿ ಮೇಕೆದಾಟು ಯೋಜನೆ ಬಗ್ಗೆ ಚರ್ಚೆ ಮಾಡೋಣ. ಅದು ಬಿಟ್ಟು ಪ್ರೇಸ್ಟಿಜ್ ಆಗಿ ತೆಗೆದುಕೊಳ್ಳುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದರು.

ಡಿಕೆಶಿ,ಸಿದ್ದರಾಮಯ್ಯ,ಖರ್ಗೆ ಅಂತವರೇ ಹೀಗೇ ಮಾಡಿದರೆ ಹೇಗೆ. ಬೀದಿ ಹೋರಾಟ ಮಾಡೊಕೆ ಹೋಗಿದ್ದಾರೆ. ಅಧಿವೇಶನದಲ್ಲಿ ಆ ಬಗ್ಗೆ ಚರ್ಚೆಯೇ ಮಾಡಿಲ್ಲ. ಈಗ ಬಂದು ಬೀದಿ ಹೋರಾಟ ಮಾಡ್ತಿದ್ದಾರೆ.

ಕೊರೊನಾ ಹೆಚ್ಚಾಗ್ತಿದೆ, ಕಡಿಮೆಯಾಗಿದ್ರೆ ಓಕೆ ಅನ್ನಬಹುದಿತ್ತು. ಯಾವ ಪಕ್ಷದ ನಾಯಕರು ಮಾಡಿದ್ರು ಕಾನೂನು ಕ್ರಮ ಕೈಗೊಳ್ಳಲಿ ಎಂದು ಅವರು ಹೇಳಿದರು.

Edited By : Shivu K
Kshetra Samachara

Kshetra Samachara

10/01/2022 01:31 pm

Cinque Terre

16.15 K

Cinque Terre

9

ಸಂಬಂಧಿತ ಸುದ್ದಿ