ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಯಾವಾಗ ಸ್ಫೋಟ ಮಾಡ್ಬೇಕೋ ಅವಾಗ ಮಾಡ್ತೀನಿ: ಯತ್ನಾಳ್

ಹುಬ್ಬಳ್ಳಿ: ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಕೇವಲ ಪಕ್ಷದ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಹಾಗೂ ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಪಕ್ಷ ಯಾವುದೇ ಸ್ಥಾನ ಕೊಟ್ಟರೂ ಅದನ್ನು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರ ದ ಆಸೆ ಇಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ. ನಾನು ಯಾವಾಗಲೂ ಕೂಲ್ ಇರ್ತೀನಿ. ಯಾವಾಗ ಸ್ಫೋಟ ಮಾಡಬೇಕೋ ಅವಾಗ ಮಾಡ್ತೀನಿ ಎನ್ನುವ ಮೂಲಕ ರಾಜಕೀಯ ಸಂಚಲನದ ಸೃಷ್ಟಿಯ ಬಗ್ಗೆ ಸುಳಿವು ನೀಡಿದರು.

Edited By : Shivu K
Kshetra Samachara

Kshetra Samachara

29/12/2021 04:34 pm

Cinque Terre

31.4 K

Cinque Terre

10

ಸಂಬಂಧಿತ ಸುದ್ದಿ