ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಗ್ರಾಮ ಪಂ ಗೆ ಮೂವರು ಸದಸ್ಯರ ಅವಿರೋಧ ಆಯ್ಕೆ !

ಕಲಘಟಗಿ: ತಾಲೂಕಿನ‌ ಬೇಗೂರ ಗ್ರಾಮ ಪಂಚಾಯತಿಗೆ ತೆರವಾದ 19 ಸದಸ್ಯರ ಪೈಕಿ ಮೂವರು ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ.16 ಸದಸ್ಯರಿಗೆ ಡಿ.27 ರಂದು ಚುನಾವಣೆ ನಡೆದಿದ್ದು,ಅಖಾಡದಲ್ಲಿ 40 ಅಭ್ಯರ್ಥಿಗಳು ಕಣದಲ್ಲಿ ಸ್ಪರ್ಧೆ ಮಾಡಿದ್ದಾರೆ. ಈಗಾಗಲೇ ಡಿಸೆಂಬರ 17 ರವರೆಗೆ ನಾಮಪತ್ರ ಸಲ್ಲಿಕೆಯಾಗಿ ದಿ.18 ರಂದು ನಾಮಪತ್ರ ಪರಿಶೀಲನೆ ನಡೆದು ದಿ.20 ರಂದು ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಕೂಡಾ ಮುಕ್ತಾಯಗೊಂಡು ಡಿ.27 ರಂದು ಚುನಾವಣಾ ಕೂಡ ನಡೆದಿದ್ದು,ನಾಳೆ 40 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಬೇಗೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೇಗೂರ ಹಾಗೂ ಬಿಸರಳ್ಳಿ ಗ್ರಾಮದ ಮೂವರು ಸದಸ್ಯರು ಅವಿರೋದ ಆಯ್ಕೆ:

ಈಗಾಗಲೇ ಬೇಗೂರ ಗ್ರಾಮದ ಒಂದನೇ ವಾರ್ಡಿನಲ್ಲಿ 'ಅ' ವರ್ಗದ ಅಭ್ಯರ್ಥಿಗಳಾದ ಹನುಮಂತಪ್ಪ ಗೌರಿ, ದ್ಯಾಮವ್ವ ಬಡಿಗೇರ ಹಾಗೂ ಬಿಸರಳ್ಳಿ ಗ್ರಾಮದ ದ್ರಾಕ್ಷಾಯಿಣಿ ಹಡಪದ ಮೂವರು ಸದಸ್ಯರ ವಿರುದ್ದ ಯಾರು ಕೂಡಾ ನಾಮಪತ್ರ ಸಲ್ಲಿಕೆ ಯಾಗದೆ ಇರುವದರಿಂದ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಅವಿರೋದ ಆಯ್ಕೆಯಾಗಿದ್ದಾರೆ.ಈಗ 16 ಸದಸ್ಯರಿಗೆ ಮಾತ್ರ ಚುನಾವಣೆ ಜರುಗಿದ್ದು, ಡಿಸೆಂಬರ್ 30 ರಂದು ಚುನಾವಣೆ ಫಲಿತಾಂಶ ಹೊರಬೀಳಲಿದೆ.

Edited By :
Kshetra Samachara

Kshetra Samachara

29/12/2021 01:56 pm

Cinque Terre

14.56 K

Cinque Terre

0

ಸಂಬಂಧಿತ ಸುದ್ದಿ