ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಏನ್ ಲಾಡ್ ಸಾಹೇಬ್ರೆ ಕೊರೊನಾ ಸೇನಾನಿಗಳನ್ನು 3 ಗಂಟೆ ಕಾಯಿಸುವುದು ಸೂಕ್ತವೆ?

ಪಬ್ಲಿಕ್ ನೆಕ್ಸ್ಟ್ : ರಾಜೇಶ್ ಹೂಗಾರ

ಕಲಘಟಗಿ : ಮಾಜಿ ಸಚಿವ ಸಂತೋಷ್ ಲಾಡ್ ನಿಜವಾಗಿಯೂ ಕೊಡುಗೈ ದಾನಿ. ಆದರೆ ಕ್ಷೇತ್ರದ ಜನತೆಗೆ ಸಹಾಯ ಹಸ್ತ ಚಾಚುವಾಗ ತಮ್ಮ ಚುನಾವಣಾ ಪ್ರಚಾರವನ್ನು ಅಷ್ಟೇ ಪ್ರೀತಿಯಿಂದ ಮಾಡಿಕೊಳ್ಳುತ್ತಾರೆ ಎಂದು ವಿರೋಧಿಗಳು ಟೀಕಿಸಿದರೆ ಏನು ಮಾಡಲು ಸಾಧ್ಯ.

ಯಾವುದೇ ರಾಜಕಾರಣಿ ಏನೇ ಮಾಡಿದರೂ ಅದರ ಹಿಂದೆ ಸ್ವಾರ್ಥ ಇದ್ದೇ ಇರುತ್ತೆ. ಅದಕ್ಕೆ ಲಾಡ್ ಸಹ ಹೊರತಾಗಿಲ್ಲ. ಪರಿಸ್ಥಿತಿ ಸದುಪಯೋಗ ಪಡಿಸಿಕೊಳ್ಳುವುದರಲ್ಲಿ ಇವರೂ ಹಿಂದೆ ಬಿದ್ದಿಲ್ಲ. ಕಲಘಟಗಿ ಕ್ಷೇತ್ರದಲ್ಲಿ ತಿಂಗಳಿಗೆ ಒಂದೋ ಎರಡೋ ಕಾರ್ಯಕ್ರಮ ಮಾಡಿ ಏನಾದರೂ ಹಂಚಿ ತಮ್ಮ ಟಿಕೆಟ್ ಗಟ್ಟಿ ಮಾಡಿಕೊಳ್ಳಲು ಲಾಡ್ ಹೋರಾಡುತ್ತಿದ್ದಾರೆ.

ಅದೇ ಕಾಲಕ್ಕೆ ಕೆಲವು ಬಾರಿ ಎಡವಟ್ಟು ಮಾಡಿಕೊಂಡಿದ್ದಾರೆ. ಇವರು ದೇಣಿಗೆ ನೀಡಿದ ಅಂಬ್ಯುಲೆನ್ಸದಲ್ಲಿ ಚಿಕಿತ್ಸೆ ಪಡೆದ ವ್ಯಕ್ತಿಯೊಬ್ಬನಿಗೆ ರಿಯಾಕ್ಷನ್ ಆಗಿ ಧಾರವಾಡ ಜಿಲ್ಲಾಸ್ಪತ್ರೆ ಸೇರಿದ್ದ.

ಆಹಾರ ಕಿಟ್ ಹಂಚಿಕೆ ವಿಚಾರದಲ್ಲಿ ಲಾಡ್ ಅವರ ಸ್ನೇಹಿತ ನಾಗರಾಜ್ ಛಬ್ಬಿ ಬೆಂಬಲಿಗರೇ ಲಾಡ್ ಬೆಂಬಲಿಗರ ಜೊತೆ ಕೈ ಕೈ ಮಿಲಾಯಿಸಿದ್ದರು. ಇರಲಿ ಎಷ್ಟೇ ಆಗಲಿ ಇಬ್ಬರೂ "ಕೈ'' ನಾಯಕರಲ್ಲವೆ?

ಈಗ ಮತ್ತೊಂದು ಇಂತಹ ಪ್ರಸಂಗ ನಡೆದಿದೆ. ಸೋಮವಾರ ಸಂಜೆ ಕೊರೊನಾ ಸೇನಾನಿಗಳು ಹಾಗೂ ದಾದಿಯರಿಗೆ ಕಿಟ್ ಹಂಚುವುದು ಹಾಗೂ ಸನ್ಮಾನಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಿಟ್ ಪಡೆಯಲು ಬಂದ ದಾದಿಯರು ಹಾಗೂ ಇತರರನ್ನ ಸಾಲಾಗಿ ಕೂಡ್ರಿಸಲಾಯಿತು. ಸಾರ್ವಜನಿಕರು ಹಾಗೂ ಮಾಧ್ಯಮದವರೂ ಕಿಕ್ಕಿರಿದು ಸೇರಿದ್ದರು.

ಲಾಡ್ ಸಾಹೇಬರ ಕಾರ್ಯಕ್ರಮವೆಂದರೆ ಸಾಮಾನ್ಯವೆ? ಅವರ ಹಿಂಬಾಲಕರು ಕೆಲವು ನಾಯಕರು ಲಾಡ್ ಅವರು ಹೊಗಳಲು ಆರಂಭಸಿದರು. ಮೊದಲೆ ಕಾರ್ಯಕ್ರಮ ಎರಡು ಗಂಟೆ ತಡವಾಗಿ ಆರಂಭವಾಯಿತು. ನಂತರ ಅವರಿವರ ಭಾಷಣದ ಸುರಿಮಳೆ. ಇತ್ತ ಕತ್ತಲು ಆವರಿಸ ತೊಡಗಿದರೆ ಅತ್ತ ಕೊರೆಯುವ ಚಳಿ. ಇನ್ನು ಇವರ ಕಿಟ್ ಗಾಗಿ ಕಾಯುತ್ತ ಕುಳಿತರೆ ನಮ್ಮ ಗತಿ ಮುಗಿಯಿತು ಎಂಬು ಭಾವಿಸಿದ ಸ್ಟಾಪ್ ನರ್ಸುಗಳು ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡಿ ಮನೆ ಹಾದಿ ಹಿಡಿಯ ತೊಡಗಿದರು.

ಇದರಿಂದ ಕಂಗಾಲಾದ ಲಾಡ್ ಬೆಂಬಲಿಗರು ಹಾಗೂ ಸ್ವತಃ ಲಾಡ್ ಅವರೆ ಮನೆಗೆ ಹೊರಟವನ್ನು ತಡೆಯಲು ಹರಸಾಹಸ ಮಾಡಬೇಕಾಯಿತು. " ಅಕ್ಕಾವ್ರ ಹೋಗ ಬ್ಯಾಡ್ ಬರ್ರಿ, ಏಯ್ ಅವ್ರನ್ ಕುರ್ಚಿ ಮ್ಯಾಲ ಕೂಡಿಸ್ರಿ'' ಎಂದು ಕೈಮುಗಿದು ಪರಿ ಪರಿಯಾಗಿ ಬೇಡಿಕೊಳ್ಳುವ ದೃಶ್ಯ ಕಂಡು ಬಂತು.

ಕೋಪಗೊಂಡು ಕೊರೊನಾ ಸೇನಾನಿಗಳು ಎದ್ದು ಹೋಗುವುದನ್ನು ಹಾಗೂ ಅವರನ್ನು ಒತ್ತಾಯಪೂರ್ವಕಾಗಿ ಕರೆದುಕೊಂಡು ಬರುತ್ತಿರುವ ದೃಶ್ಯವನ್ನು ಸೆರೆಹಿಡಿಯಲು ಯತ್ನಿಸಿ ಮಾಧ್ಯಮಗಳ ಮೇಲೆ ಲಾಡ್ ಬೆಂಬಲಿಗರು ಹರಿಹಾಯ್ದರಲ್ಲದೆ ಮೊಬೈಲ್ ದಲ್ಲಿ ಚಿತ್ರೀಕರಿಸುವುದಕ್ಕೆ ಅಡ್ಡಿ ಪಡಿಸಿದ್ದು ಕಂಡು ಬಂತು.

ಈ ಘಟನೆ ಕೆಲವರಿಗೆ ಚಿಕ್ಕದು ಎನಿಸಬಹುದು. ಆದರೆ ಕೇವಲ ತಮ್ಮ ಪ್ರಚಾರಕ್ಕಾಗಿ ಕಿಟ್ ನೆಪದಲ್ಲಿ ಮಹಿಳೆಯರನ್ನು ಮೂರ್ನಾಲ್ಕು ಗಂಟೆ ಕಾಯಿಸಿ ತೊಂದರೆ ಕೊಡುವುದು ಎಷ್ಟು ಸೂಕ್ತ? ಇಲ್ಲಿ ಮಾತ್ರವಲ್ಲ ಮುಖ್ಯಮಂತ್ರಿ ಇರಬಹುದು ಅಥವಾ ಮಂತ್ರಿ ಇರಬಹುದು ಇವರ ಬಹುತೇಕ ಕಾರ್ಯಕ್ರಮಗಳಲ್ಲಿ ಮಹಿಳೆಯರು ಹಾಗೂ ಮಕ್ಕಳನ್ನು ಗಂಟೆ ಗಟ್ಟಲೆ ಕಾಯಿಸುವುದು ನಡೆದೇ ಇದೆ. ಇದಕ್ಕೆ ಕೊನೆ ಹಾಡಲೇ ಬೇಕು.

Edited By : Manjunath H D
Kshetra Samachara

Kshetra Samachara

22/12/2021 12:23 pm

Cinque Terre

21.53 K

Cinque Terre

11

ಸಂಬಂಧಿತ ಸುದ್ದಿ