ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪ್ರತಿಭಟನೆ ಕೈ ಬಿಟ್ಟ ಸರ್ವೇಯರ್ ರೈತರ ಜಮೀನು ಕೆಲಸ ಸಲೀಸು

ಕುಂದಗೋಳ : ಸೇವಾ ಭದ್ರತೆ, ವೇತನ ಹೆಚ್ಚಳ, ನಿರ್ದಿಷ್ಟ ಕೆಲಸ ಸೇರಿದಂತೆ ಹಲವಾರು ಬೇಡಿಕೆಗಳಿಗೆ ಒತ್ತಾಯಿಸಿ ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸಿದ್ದ ಕುಂದಗೋಳ ಭೂ ಮಾಪನಾ ಇಲಾಖೆ ಲೈಸೆನ್ಸ್ ಸರ್ವೇ ಸಿಬ್ಬಂದಿಗಳು ಪುನಃ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಹೌದು ! ಭೂ ಮಾಪನಾ ಇಲಾಖೆ ಲೈಸೆನ್ಸ್ ಸರ್ವೇ ಏಳು ಜನಾ ಸಿಬ್ಬಂದಿಗಳು ‌ಸೇರಿ ರಾಜ್ಯಾದ್ಯಂತ 2400ಕ್ಕೂ ಹೆಚ್ಚು ಲೈಸೆನ್ಸ್ ಸರ್ವೇದಾರರು, ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕೈಗೊಂಡ ಪ್ರತಿಭಟನೆಗೆ ಕಮಿಷನರ್ ಬೇಡಿಕೆ ಈಡೇರಿಕೆ ಆಶ್ವಾಸನೆ ನೀಡಿದ ಹಿನ್ನೆಲೆಯಲ್ಲಿ ಮರಳಿ ಕಳೆದ ಶುಕ್ರವಾರ ಡಿ.10 ರಿಂದ ಕರ್ತವ್ಯಕ್ಕೆ ಹಾಜರಾಗಿ ಸರ್ವೇ ಕಾರ್ಯ ಕೈಗೊಂಡಿದ್ದಾರೆ.

ಈ ಹಿಂದೆ ಸರ್ಕಾರಿ ಸ್ವಾಮ್ಯದ ಕರ್ತವ್ಯಕ್ಕೆ ಒಳಪಡದೆ ಲೈಸೆನ್ಸ್ ಸರ್ವೇದಾರರು ತಮ್ಮ ಪ್ರತಿ ಸರ್ವೇ ಕಾರ್ಯಕ್ಕೆ ನೀಡುವ ಹಣ ಹೆಚ್ಚಿಸುವಂತೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಭೂ ಮಾಪನ ಇಲಾಖೆಯಲ್ಲಿ ವಿಲೇವಾರಿ ಆಗದೆ ಉಳಿದ 1030 ಅರ್ಜಿ ಕಾರ್ಯ ನಡೆದಿದ್ದು, ಇನ್ಮುಂದೆ ರೈತರು ಪೋಡಿ, ತತ್ಕಾಲ್ ಪೋಡಿ, ಜಮೀನು ವಿಂಗಡಣೆ ಕೆಲಸಗಳು ಸರಳವಾಗಲಿವೆ.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Nagesh Gaonkar
Kshetra Samachara

Kshetra Samachara

15/12/2021 03:12 pm

Cinque Terre

17.12 K

Cinque Terre

0

ಸಂಬಂಧಿತ ಸುದ್ದಿ