ಧಾರವಾಡ: ಕನ್ನಡದ ದೇವಸ್ಥಾನ ಎಂದೇ ಹೆಸರಾಗಿರುವ ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಡಾ.ಪಾಟೀಲ ಪುಟ್ಟಪ್ಪನವರ ತರುವಾಯ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರ ನೇತೃತ್ವದಲ್ಲಿ ಇನ್ನು ಮುಂದೆ ಕರ್ನಾಟಕ ವಿದ್ಯಾವರ್ಧಕ ಸಂಘ ಮುನ್ನಡೆಯಲಿದೆ.
ಚಂದ್ರಕಾಂತ ಬೆಲ್ಲದ, ಹನುಮಾಕ್ಷಿ ಗೋಗಿ, ಸಂಜೀವ ಧುಮ್ಮಕನಾಳ ಹಾಗೂ ಬಸಯ್ಯ ಶಿರೋಳ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಸಿದ್ದರು. ಕೊನೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಚಂದ್ರಕಾಂತ ಬೆಲ್ಲದ ಆಯ್ಕೆಯಾಗಿದ್ದಾರೆ.
ಸಮಾನ ಮನಸ್ಕರ ವೇದಿಕೆ, ಅನುಭವ ಮಂಟಪ, ಚಂದ್ರಕಾಂತ ಬೆಲ್ಲದ ಬಣ ಸೇರಿದಂತೆ ಅನೇಕರು ಈ ಚುನಾವಣೆಯಲ್ಲಿ ಸ್ಪರ್ಧೆ ನಡೆಸಿದ್ದರು. ಕಾರ್ಯಕಾರಿಣಿ ಮಂಡಳಿಗೂ ಅನೇಕರು ಸ್ಪರ್ಧೆ ನಡೆಸಿದ್ದು, ರಾತ್ರಿವರೆಗೂ ಮತ ಎಣಿಕೆ ಮುಂದುವರೆದಿತ್ತು.
Kshetra Samachara
29/11/2021 07:29 pm