ಹುಬ್ಬಳ್ಳಿ: ಕನ್ನಡದ ಖ್ಯಾತ ಚಲನಚಿತ್ರ ಸಾಹಿತಿ ಹಾಗೂ ಸಂಗೀತಗಾರರಾದ ಡಾ.ಹಂಸಲೇಖ ಅವರ ದಲಿತಪರ ಹೇಳಿಕೆಯ ಬಗ್ಗೆ ಪೊಲೀಸ್ ದೂರು ದಾಖಲು ಮಾಡಿರುವುದನ್ನು ವಿರೋಧಿಸಿ ಡಾ.ಬಿ.ಅರ್. ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿಯ ವತಿಯಿಂದ ಹುಬ್ಬಳ್ಳಿಯ ಮಿನಿವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.
ದಲಿತರ ಮನೆಯಲ್ಲಿ ಪೇಜಾವರ ಶ್ರೀಗಳ ವಾಸ್ತವ್ಯದ ಕುರಿತು ಹೇಳಿಕೆ ನೀಡಿರುವುದು ನಿಜಕ್ಕೂ ಸ್ವಾಗತಾರ್ಹವಾಗಿದೆ. ಅಲ್ಲದೇ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಇದೊಂದು ಮಾರ್ಗವಾಗಿದೆ ಎಂಬುವಂತ ಹಂಸಲೇಖ ಅವರ ನಿಲುವು ದಲಿತರಪರವಾಗಿದೆ. ಈ ನಿಟ್ಟಿನಲ್ಲಿ ಈ ಹೇಳಿಕೆಯನ್ನು ವಿರೋಧಿಸಿ ಸಾಹಿತಿ ಹಂಸಲೇಖ ಅವರ ಮೇಲೆ ಪೊಲೀಸ್ ದೂರು ನೀಡಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಕೂಡಲೇ ಇಂತಹ ದುಷ್ಟ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಬೇಕು ಎಂದು ಒತ್ತಾಯಿಸಿದರು.
Kshetra Samachara
23/11/2021 01:48 pm