ಹುಬ್ಬಳ್ಳಿ: ರಾಜ್ಯದ ಜನರ ಮೇಲಿನ ಹೊರೆ ಕಡಿಮೆ ಮಾಡುವ ದೃಷ್ಟಿಯಿಂದ ಪೆಟ್ರೋಲ್ ಮೇಲೆ 7, ಡಿಸೇಲ್ 7 ಸೇಸ್ ನ್ನು ಕಡಿಮೆ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಿಂದ ಮಧ್ಯಮ ಮತ್ತು ಬಡವರಿಗೂ ಸಾಕಷ್ಟು ತೊಂದರೆಯಾಗಿತ್ತು. ಬೆಲೆ ಏರಿಕೆಯಿಂದ ಇತರ ತೊಂದರೆಗಳು ಉಂಟಾಗಿದ್ದವು. ಜನರು ಬೆಲೆ ಇಳಿಕೆ ಮಾಡಬೇಕೆಂಬ ಬೇಡಿಕೆ ಇತ್ತು. ಅದರಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ 5, ಡಿಸೇಲ್ ಗೆ 10 ರೂಪಾಯಿ ಇಳಿಕೆ ಮಾಡಿ ದೇಶದ ಪ್ರಧಾನಿ ಜನರಿಗೆ ದೀಪಾವಳಿ ಗಿಪ್ಟ್ ನೀಡಿದೆ ಎಂದರು.
ಇನ್ನು ಡಿಸೇಲ್ 10 ಮತ್ತು ಪೆಟ್ರೋಲ್ ಮೇಲಿನ
5 ರೂ ಸೇಸ್ ಎಂದು ಕಂಡು ಬಂದರು ಇದರಿಂದ ಸರ್ಕಾರಕ್ಕೆ ಲಕ್ಷಾಂತರ ಕೋಟಿ ಬರುತ್ತಿತ್ತು. ಆದರೆ ಜನರಿಗೆ ಬಾರವಾಗಬಾರದೆಂಬ ದೃಷ್ಟಿಯಿಂದ ಸೇಸ್ ನ್ನು ಕಡಿಮೆ ಮಾಡಿದ್ದೇವೆ. ರಾಜ್ಯ ದಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರ ಈ ಹಿಂದೆಯೇ ತಿಳಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಪೆಟ್ರೋಲ್ ಡಿಸೇಲ್ ಮೇಲಿನ ಸೇಸ್ ಕಡಿಮೆ ಮಾಡಿದ ಬೆನ್ನಲ್ಲೇ ರಾಜ್ಯದಲ್ಲಿ ಪೆಟ್ರೋಲ್ ಮೇಲೆ 7, ಡಿಸೇಲ್ ಮೇಲೆ 7 ರೂ ಕಡಿಮೆ ಮಾಡಿ ನಾಗರಿಕರಿಗೆ ಅನುಕೂಲ ಮಾಡಿ ಕೊಟ್ಟಿದೆ ಎಂದರು.
ರಾಜ್ಯ ಸರ್ಕಾರ ನೂರು ದಿನ ಪೂರೈಕೆ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಕೂಡಾ ಸ್ವಾಗತ ಮಾಡತ್ತೇನೆ. ಬಹಳಷ್ಟು ನಾಯಕತ್ವ ಬದಲಾವಣೆ ಮಾತುಗಳ ನಡುವೆ ಬಸವರಾಜ ಬೊಮ್ಮಾಯಿ ಅವರು ನಾಯಕತ್ವದಲ್ಲಿ ಸರಳವಾಗಿ ಸಾಂಗವಾಗಿ ಆಡಳಿತ ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಚೆನ್ನಾಗಿ ನಡೆಯಲಿ ಎಂದರು.
ಬೀಟ್ ಕ್ವಾಯಿನ್ ವಿಚಾರವಾಗಿ ಕಾಂಗ್ರೆಸ್ ನ್ಯಾಯಾಂಗ ತನಿಖೆ ಆದೇಶಕ್ಕೆ ಒತ್ತಾಯದ ವಿಚಾರವಾಗಿ ಮಾತನಾಡಿ, ಬೀಟ್ ಕ್ವಾಯಿನ್ ವಿಚಾರವನ್ನು ಈಗಾಗಲೇ ಇಡೀ ಮತ್ತು ಸಿಬಿಐಗೆ ಕೊಡುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ನೀಡಿದೆ. ಸುಮ್ಮನೆ ಊಹಾಪೋಹಗಳ ಮೇಲೆ ಸಿದ್ದರಾಮಯ್ಯ ಆರೋಪ ಮಾಡುವುದನ್ನು ನಿಲ್ಲಿಸಬೇಕು. ಅವರ ಕಡೆ ಇರುವ ಸಾಕ್ಷ್ಯವನ್ನು ಬೆಳಕಿಗೆ ತರಲಿ ಎಂದ ಅವರು, ಸಚಿವ ಸಂಪುಟ ನನಗೆ ಗೊತ್ತಿಲ್ಲ, ಈ ಬಗ್ಗೆ ಹೈಕಮಾಂಡ ತೀರ್ಮಾನ ಮಾಡಬೇಕಿದೆ ಎಂದರು.
Kshetra Samachara
04/11/2021 01:50 pm