ಹುಬ್ಬಳ್ಳಿ: ಉಪಚುನಾವಣೆಯಲ್ಲಿ ಬಿಜೆಪಿಯಿಂದ ಹಣ ಹಂಚಿಕೆ ಮಾಡಿದೆ ಎಂಬ ಸಿದ್ಧರಾಮಯ್ಯ ಆರೋಪ ವಿಚಾರಕ್ಕೆ, ಅದು ಅವರ ಅನುಭವ ನಂಜನಗೂಡು, ಗುಂಡ್ಲುಪೇಟೆ ಕುಂದಗೋಳದಲ್ಲಿ ಅವರು ಏನು ಮಾಡಿದ್ದಾರೆ ಗೊತ್ತಿದೆ. ಅವರು ಯಾವಾಗ ಪ್ರತಿಪಕ್ಷದಲ್ಲಿ ಇರ್ತಾರೆ, ಅವರದು ಸ್ಟ್ಯಾಂಡರ್ಡ್ ಟೆಂಪಲೇಟ್ ಡೈಲಾಗ್ ನಿರಂತರವಾಗಿರುತ್ತೆ ಎಂದು ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ಅವರು ಟಾಂಗ್ ಕೊಟ್ಟಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಒಬ್ಬತ್ತು ತಿಂಗಳಲ್ಲಿ ಇಂದಿಗೆ 100 ಕೋಟಿ ಲಸಿಕೆ ಕೊಟ್ಟಿದ್ದೆವೆ.ಇನ್ನು 100 ಕೋಟಿ ಯಾರು ಯಾರು ತೊಗೊಂಡಿದ್ದಾರೆ ಅವರು ಎದ್ದು ನಿಂತು ಹೇಳಬೇಕಾ? ಹೀಗೆ ಕೇಳ್ತಾರೆ ಅಂತಾನೆ, ಸರ್ಕಾರ ಮೊದಲೇ ರಿಜಿಸ್ಟರ್ ಮಾಡಿಕೊಂಡು ಲಸಿಕೆ ಹಾಕಿಸಿದ್ದೇವೆ ಎಂದು ವಿಪ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಉತ್ತರ ನೀಡಿದ್ದಾರೆ.
Kshetra Samachara
22/10/2021 11:32 am