ಹುಬ್ಬಳ್ಳಿ: ವಿಧಾನ ಪರಿಷತ್ ಸದಸ್ಯ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ಚುನಾವಣೆಯಲ್ಲಿ ಪ್ರಚಾರ ಮಾಡದಂತೆ ಶಿಕ್ಷಕರೊಬ್ಬರಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಜೆಡಿಎಸ್ ಮುಖಂಡ ಗಜಾನನ ಅಣ್ವೇಕರ ಸೇರಿ ಮೂವರ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಕ್ತಿ ಕಾಲೋನಿ ನಿವಾಸಿ ಶಿಕ್ಷಕ ರವೀಂದ್ರ ಪಾಟೀಲ ಅಕ್ಟೋಬರ್ 16ರಂದು ರಾತ್ರಿ ಕಿರಾಣಿ ಅಂಗಡಿಯಿಂದ ಮನೆಗೆ ಹೊರಟಿದ್ದರು. ಈ ವೇಳೆ ಗಜಾನನ ಅಣ್ವೇಕರ ಹಾಗೂ ಇಬ್ಬರು ಹಿಂಬಾಲಿಸಿಕೊಂಡು ರವೀಂದ್ರ ಪಾಟೀಲ ಅವರ ಮನೆಗೆ ನುಗ್ಗಿದ್ದಾರೆ. ಬಳಿಕ ಗಜಾನನ ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರಂತೆ.
'ಬಸವರಾಜ ಹೊರಟ್ಟಿ ಸಾಹೇಬರ ವಿರುದ್ಧ ಸಂಘ ಕಟ್ಟಿಕೊಂಡು ಚುನಾವಣೆ ಮಾಡುತ್ತೀರಾ? ನಿನ್ನನ್ನು ನೇಣು ಹಾಕುತ್ತೇನೆ. ಚುನಾವಣೆ ಮುಗಿಯುವವರೆಗೂ ಹೊರಟ್ಟಿ ಸಾಹೇಬರ ವಿರುದ್ಧ ಯಾವುದೇ ಕಾರ್ಯ ಮಾಡಬಾರದು. ಒಂದು ವೇಳೆ ನಿನ್ನೆ ವರ್ತನೆ ಹೀಗೆ ಮುಂದುವರಿಸಿದರೆ ಮುಗಿಸಿ ಬಿಡುತ್ತೇನೆ ಎಂದು ಜೀವ ಬೇದರಿಕೆ ಹಾಕಿದ್ದಾರೆ ಎಂದು ರವೀಂದ್ರ ಪಾಟೀಲ ದೂರಿನಲ್ಲಿ ತಿಳಿಸಿದ್ದಾರೆ.
Kshetra Samachara
20/10/2021 09:53 am