ಹುಬ್ಬಳ್ಳಿ: ಕಳಸಾ - ಬಂಡೂರಿ ನಾಲಾ ಜೋಡಣೆ ಸೇರಿದಂತೆ, ಮಹದಾಯಿ ಯೋಜನೆ ಜಾರಿಗಾಗಿ ನರಗುಂದ ಮತ್ತು ನವಲಗುಂದದಲ್ಲಿ ನಡೆದಿರುವ ರೈತ ಹೋರಾಟ 2250 ನೇ ದಿನ ಪೂರೈಸಿದ್ದು , ಯೋಜನೆ ಸಮರ್ಪಕ ಜಾರಿಗೆ ಆಗ್ರಹಿಸಿ ಅ. 5 ರಂದು ಬೆಂಗಳೂರು ಚಲೋ ಪ್ರತಿಭಟನೆ ಆಯೋಜಿಸಲಾಗಿದೆ.
ನವಲಗುಂದ , ನರಗುಂದ ಮತ್ತು ಇತರ ಭಾಗದ 30 ಕ್ಕಿಂತ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸೋಮವಾರ ಸಂಜೆ ಹುಬ್ಬಳ್ಳಿಯಿಂ ಬೆಂಗಳೂರಿಗೆ ತೆರಳಿದರು. ಮಂಗಳವಾರ ಮಧ್ಯಾಹ್ನ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಯೋಜನೆ ಶೀಘ್ರ ಮತ್ತು ಸಮರ್ಪಕವಾಗಿ ಜಾರಿಗೊಳಿಸುವಂತೆ ಒತ್ತಾಯಿಸಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ.
Kshetra Samachara
05/10/2021 09:32 am