ಧಾರವಾಡ: ಪ್ಲಿಪ್‌ಕಾರ್ಟ್ ಕಂಪೆನಿಯಲ್ಲಿ ಸ್ಥಳೀಯರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಧಾರವಾಡ ತಾಲೂಕಿನ ಕೋಟೂರು ಗ್ರಾಮದ ನಿವಾಸಿಗಳು ಕೋಟೂರು ಕ್ರಾಸ್‌ನಲ್ಲಿರುವ ಪ್ಲಿಪ್‌ಕಾರ್ಟ್ ಕಂಪೆನಿ ಎದುರು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಜರುಗಿದೆ.
ಕೋಟೂರು ಗ್ರಾಮದಲ್ಲಿ ಪ್ಲಿಪ್‌ಕಾರ್ಟ್ ಕಂಪೆನಿ ಸ್ಥಾಪನೆಗಾಗಿ ರೈತರು ಜಮೀನು ನೀಡಿದ್ದಾರೆ. ಜಮೀನು ನೀಡಿದ ರೈತರ ಮಕ್ಕಳಿಗೆ ಉದ್ಯೋಗ ನೀಡಿಲ್ಲ. ಅದೂ ಅಲ್ಲದೇ ಕೋಟೂರು ಗ್ರಾಮದಲ್ಲಿ ಸ್ಥಾಪನೆಯಾಗಿರುವ ಈ ಕಂಪೆನಿಯಲ್ಲಿ ಒಬ್ಬರನ್ನೂ ಸ್ಥಳೀಯ ಉದ್ಯೋಗಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಬೇರೆ ಬೇರೆ ರಾಜ್ಯಗಳಿಂದ ಕೆಲಸಗಾರರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದರು.
ಸ್ಥಳೀಯರ ಪ್ರತಿಭಟನೆಯಿಂದಾಗಿ ಕಂಪೆನಿಯವರು ಸ್ಥಳೀಯರಿಗೇ ಉದ್ಯೋಗಾವಕಾಶ ನೀಡುವುದಾಗಿ ಮೌಖಿಕವಾಗಿ ಭರವಸೆ ನೀಡಿದ್ದರಿಂದ ಸ್ಥಳೀಯರು ಪ್ರತಿಭಟನೆ ಕೈಬಿಟ್ಟಿದ್ದಾರೆ.
Kshetra Samachara
04/10/2021 04:28 pm