ಕಲಘಟಗಿ : ಮುಂಬರುವ ಯಾವುದೇ ಚುನಾವಣೆ ಇರಲಿ ಜನರ ಜೊತೆ ನಿರಂತರವಾಗಿ ಸಂಪರ್ಕ ದಲ್ಲಿ ಇರುವ ಸತ್ಯವಂತರಿಗೆ ಮಾತ್ರ ಮತ ಹಾಕಿ ಆರಿಸಿ ಕಳಿಸಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ್ ಛಬ್ಬಿ ಅಭಿಪ್ರಾಯ ಪಟ್ಟರು.
ಅವರು ತಾಲೂಕಿನ ದೇವಿಕೂಪ್ಪ ಗ್ರಾಮದಲ್ಲಿ ಭಾನುವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ವಾಸ್ತವ್ಯದಲ್ಲಿ ಗ್ರಾಮಸ್ಥರಿಂದ ಕುಂದು ಕೊರತೆ ಆಲಿಸಿ ಮಾತನಾಡಿ,ರಾಜಕೀಯದಲ್ಲಿರುವ ಯಾವುದೇ ವ್ಯಕ್ತಿ ಯಾರದರೂ,ಅವರಿಗೆ ಮುಖ್ಯವಾಗಿ ಮಾನವೀತೆ ಹಾಗೂ ಮನುಷ್ಯತತ್ವದ ಗುಣಗಳು ಇರಲೇ ಬೇಕು ಹಾಗೂ ರಾಜಕೀಯದಲ್ಲಿ ಒಳ್ಳೆಯವರು ಇದ್ದಾರೆ ಕೆಟ್ಟವರು ಇದ್ದಾರೆ ಬಹಳ ಜನ ಶಾಸಕರು ವ್ಯಾಪಾರಕ್ಕೆ ರಾಜಕಾರಣ ಮಾಡುವರು ಇದ್ದಾರೆ.ರೈತರ ಬಗ್ಗೆ ದೀನ ದಲಿತರ ಬಗ್ಗೆ ಕೆಲಸ ಮಾಡುವರನ್ನು ಆರಿಸಿ ಕಳಿಸಿ ಎಂದರು.
ರೈತರು ಮೇಲೆ ಬರಬೇಕು ಉದ್ದಾರವಾಗಬೇಕು, ಬರಿ ದೊಡ್ಡವರನ್ನು ದೊಡ್ಡವರಾಗಿ ಮಾಡಬೇಡಿ,ಕ್ಷೇತ್ರ ಉದ್ದಾರ ಮಾಡೋರನ್ನ ಬೆಳೆಸಿ,ನಾನು ಯಾರ ಮುಂದೆ ಕೈ ಒಡ್ಡುವ ವ್ಯಕ್ತಿ ಅಲ್ಲ,ರಾಜಕೀಯದಲ್ಲಿ ಬಹಳ ನೋವು ಆಗಿದೆ. ಮುಂಬರುವ ತಾಪಂ ಜಿಪಂ ಚುನಾವಣೆಯಲ್ಲಿ ಒಳ್ಳೆಯ ವ್ಯಕ್ತಿಗಳನ್ನ ಆಯ್ಕೆ ಮಾಡೋಣ ನಿಮ್ಮಲ್ಲರಿಗೂ ಚಿರರುಣೆಯಾಗಿರುತ್ತೇನೆ ಎಂದರು.
ಗ್ರಾಮದ ಅಭಿವೃದ್ಧಿ,ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಜೂರು ಕುರಿತು ಗ್ರಾಮಸ್ಥರು ಸಲ್ಲಿಸಿದರು.ಅಣ್ಣಪ್ಪ ಓಲೇಕಾರ,ಕಿರಣ ಪಾಟೀಲಕುಲಕರ್ಣಿ,ಗುರುನಾಥ ದಾನವೇನವರ,ಸಹದೇವ ಕೆಲಗೇರಿ,ನಿಜಗುಣಿ ಕೆಲಗೇರಿ,ಶಾಂತಲಿಂಗ ಬೇರುಡಗಿ,ಸುಭಾಸ ಮುದಿಗೌಡರ ಹಾಗೂ ಮುಖಂಡರು ಉಪಸ್ಥಿತರಿದ್ದರು.
Kshetra Samachara
27/09/2021 04:07 pm