ಕಲಘಟಗಿ: ಪಟ್ಟಣದ ಬಮ್ಮಿಗಟ್ಟಿ ಕ್ರಾಸ್ ಹತ್ತಿರ ಕರ್ನಾಟಕ ಸಂಗ್ರಾಮ ಸೇನೆ ಪದಾಧಿಕಾರಿಗಳು ಚಹಾಮಾಡಿ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದರು.
ಸೋಮವಾರ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿ ಒಲೆ ಹೊತ್ತಿಸಿ ಚಹಾ ಮಾಡಿ ಕೇಂದ್ರ ಸರಕಾರದ ಇಂಧನ ಬೆಲೆ ಎರಿಕೆ ನೀತಿಯನ್ನು ಹಾಗೂ ಕೃಷಿ ಕಾಯ್ದೆ ಮಸೂದೆಗಳನ್ನು ವಿರೋಧಿಸಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಸಾತಪ್ಪ ಕುಂಕೂರ,ಶಂಕರಗೌಡ ಭಾವಿಕಟ್ಟಿ,ಸೌಮ್ಯಾ ನಾಯಕಿ,ನಾಗರಾಜ ತೇಗಣ್ಣವರ ಬಸವರಾಜ ಗಣೇಶಪ್ಪನರ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
27/09/2021 03:23 pm