ನವಲಗುಂದ : ಕೇಂದ್ರ ಬಿಜೆಪಿ ಸರ್ಕಾರದ ರೈತ ಕಾಯ್ದೆ ವಿರೋಧಿಸಿ ಇಂದು ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ನವಲಗುಂದದ ಕರ್ನಾಟಕ ರಾಜ್ಯ ಜಾತ್ಯಾತೀತ ಪಕ್ಷಾತೀತ ಮಹದಾಯಿ ಕಳಸಾ ಬಂಡೂರಿ ರೈತ ಅಸಂಘಟಿತ ಕಾರ್ಮಿಕರ, ಮಹಿಳೆಯರ ರೈತ ಹೋರಾಟ ಒಕ್ಕೂಟ ಕೇಂದ್ರ ಸಮಿತಿ ವತಿಯಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದರು.
ಇನ್ನು ಚಕ್ಕಡಿ ಏರಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ಬಂದು, ನವಲಗುಂದ ಭಾಗದ ರೈತರ ಪ್ರಮುಖ ಬೇಡಿಕೆಯಾದ ಮಹದಾಯಿ ಕಳಸಾ ಬಂಡೂರಿ ಯೋಜನೆಯ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು ಎಂಬುದರ ಜೊತೆ ಜೊತೆಗೆ ಅತಿವೃಷ್ಟಿಯಿಂದ ಹಾನಿಗೋಳಗಾದ ರೈತರಿಗೆ ಪರಿಹಾರ ಮತ್ತು ಕೃಷಿ ಸಾಲವನ್ನು ಮನ್ನಾ ಮಾಡಬೇಕು ಎಂಬ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಇದೆ ವೇಳೆ ಆಗ್ರಹಿಸಿದರು. ಅಷ್ಟೇ ಅಲ್ಲದೇ ಸ್ಥಳಕ್ಕೆ ಕೂಡಲೇ ಜಿಲ್ಲಾಧಿಕಾರಿಗಳು ಬರಬೇಕು ಎಂದು ಅಧ್ಯಕ್ಷರಾದ ಲೋಕನಾಥ ಹೆಬಸೂರ ಅವರು ಪಟ್ಟು ಹಿಡಿದಿದ್ದರು. ನಂತರ ಸಿಪಿಐ ಮಠಪತಿ ಮತ್ತು ಪಿ ಎಸ್ ಐ ಕಲ್ಮೇಶ ಬೆನ್ನೂರ, ಉಪ ತಹಶೀಲ್ದಾರ್ ಅವರು ಮನ ಒಲಿಸಿದರು. ನಂತರ ಮೂರು ದಿನಗಳ ಒಳಗೆ ಸ್ಥಳೀಯ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
Kshetra Samachara
27/09/2021 03:23 pm