ಹುಬ್ಬಳ್ಳಿ: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ವಿರೋಧಿಸಿ ರೈತ ಸಂಘಟನೆಗಳು ದೇಶಾದ್ಯಂತ ಕರೆ ನೀಡಿರುವ ಭಾರತ ಬಂದ್ ಗೆ ವಾಣಿಜ್ಯನಗರಿ ಹುಬ್ಬಳ್ಳಿಯ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಭಾರತ ಬಂದ್ ಗೆ ವ್ಯಾಪಕವಾದ ಬೆಂಬಲ ಸಿಕ್ಕಿಲ್ಲ ಈ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿ ಬಂದ್ ಬಿಸಿ ಇಲ್ಲದಂತಾಗಿದ್ದು, ಎಂದಿನಂತೆ ಬಸ್, ಆಟೋಗಳು ಓಡಾಡುತ್ತಿವೆ. ಅಲ್ಲದೇ ಪ್ರತಿನಿತ್ಯದಂತೆ ಹೊಟೇಲ್, ಅಂಗಡಿ ಮುಂಗ್ಗಟ್ಟುಗಳು ತೆರೆದಿದ್ದು, ಯಾವುದೇ ಬೆಂಬಲ ದೊರೆತಿಲ್ಲ.
ಇನ್ನೂ ಮುಂಜಾನೆ 10 ಗಂಟೆಗೆ ರೈತ ಸಂಘಟನೆಗಳು
ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಿದ್ದು, ಭಾರತ ಬಂದ್ ಯಾವ ರೀತಿಯ ಬೆಂಬಲ ಸಿಗಲಿದೆ ಎಂಬುವುದನ್ನು ಕಾದುನೋಡಬೇಕಿದೆ.
Kshetra Samachara
27/09/2021 08:55 am