ಹುಬ್ಬಳ್ಳಿ: ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಪಕ್ಷದ ಸಂಘಟನೆ. ಬೆಳವಣಿಗೆ ಬಗ್ಗೆ ಚರ್ಚ ನಡೆಯುತ್ತಿದೆ. ದೇವಸ್ಥಾನ ತೆರವು ವಿಚಾರ ಬಹಳ ಸೂಕ್ಷ್ಮ ವಿಚಾರ. ಸುಪ್ರೀಂಕೋರ್ಟ್ ತೀರ್ಪು ಇರಬಹುದು. ಆದರೆ ಪುರಾತನ ದೇವಾಲಯ ತೆರವು ವೇಳೆ ಅರ್ಚಾತುರ್ಯ ಆಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಕೆಲವು ಕಂಡಿಷನ್ ಹಾಗೂ ನಿರ್ದೇಶನಗಳಿವೆ. ಆದರೆ ತರಾತುರಿಯಲ್ಲಿ ದೇವಾಲಯಗಳನ್ನು ಒಡೆಯಬಾರದು.
ರಸ್ತೆಗಳಿಗೆ ಅಡ್ಡಿ ಆಗುವುದನ್ನು ತೆರವುಗೊಳಿಸಬಹುದು.
ನೂರಾರು ವರ್ಷಗಳ ಹಳೆಯ ದೇವಾಲಯ ಕೆಡುವುವ ವೇಳೆ ಸಂಬಂಧಪಟ್ಟವರ ಜೊತೆ ಚರ್ಚೆ ಮಾಡಬೇಕಿತ್ತು ಎಂದರು.
ಅಧಿಕಾರಿಗಳು ವ್ಯವಹಾರಿಕವಾಗಿ ಚರ್ಚೆ ಮಾಡಬೇಕಿತ್ತು. ಅಧಿಕಾರಿಗಳ ತೀರ್ಮಾನದಲ್ಲಿ ರಸ್ತೆಗಳಿಗೆ ಅಡ್ಡಿ ಆಗುವ ಧಾರ್ಮಿಕ ಕೇಂದ್ರಗಳ ತೆರವು ವಿಚಾರವಾಗಿ ಕೆಲವಡೆ ಭೂಸ್ವಾಧೀನ ಆಗಿದೆ. ಪರಿಹಾರ ತಗೆದುಕೊಂಡ ನಂತರವೂ ಕೆಲವಡೆ ತೆರವು ಮಾಡಿಲ್ಲ. ಈ ಕುರಿತು ನಾನು ಅಧಿಕಾರಿಗಳ ಜೊತೆ ಚರ್ಚೆ ಮಾಡಿದಾಗಲೂ. ಅಧಿಕಾರಿಗಳು ಅಸಡ್ಡೆ ತೋರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Kshetra Samachara
18/09/2021 02:49 pm