ಶಿಗ್ಗಾಂವ: ಹಾವೇರಿ ಜಿಲ್ಲೆ ಶಿಗ್ಗಾಂವ ತಾಲ್ಲೂಕಿನ ಕುನ್ನೂರ ಗ್ರಾಮ ಪಂಚಾಯತಿಯಲ್ಲಿ ಮಹಿಳಾ ಸದಸ್ಯರ ಬದಲು ಅವರ ಗಂಡಂದಿರು ಅಧಿಕಾರ ನಿರ್ವಹಿಸುತ್ತಿರುವ ಆರೋಪ ಕೇಳಿ ಬಂದಿದೆ.
ಹೌದು. ಕುನ್ನೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಯ ಮೀಟಿಂಗಿನಲ್ಲಿ ತಮ್ಮದೆ ಲೋಕದಲ್ಲಿದ್ದ ಪಂಚಾಯತಿ ಸದಸ್ಯರು, ಸಭೆಯ ಬಗ್ಗೆ ಮಾತನಾಡುವುದನ್ನು ಬಿಟ್ಟು, ಅವರು ಕೇವಲ ಮೊಬೈಲ್ ಹಾಗೂ ಪೇಪರ್ ಓದುವುದರಲ್ಲಿ ನಿರತರಾಗಿದ್ದಾರೆ. ಈ ಒಂದು ಮೀಟಿಂಗಿಗೆ ಸದಸ್ಯರೊಬ್ಬರ ಪತಿ ಹಾಜರಿದ್ದು, ಸರಕಾರದ ಮಾರ್ಗ ಸೂಚಿಯನ್ನು ಗಾಳಿಗೆ ತೂರಿದ್ದಾರೆ.
ಸರಕಾರದ ಆದೇಶದಂತೆ ಸದಸ್ಯರು ಹಾಗೂ ಆಶಾ ಕಾರ್ಯಕರ್ತರು ಅಂಗನವಾಡಿ ಶಿಕ್ಷಕರು ಪಂಚಾಯತ್ ಸಿಬ್ಬಂದಿ ಮಾತ್ರ ಈ ಒಂದು ಸಭೆಗೆ ಹಾಜರಿರಬೇಕು, ಬದಲಾಗಿ ಇಲ್ಲಿ ಸದಸ್ಯರ ಪತಿ ಹಾಜರಿದ್ದರು, ಇದರ ಬಗ್ಗೆ ಸಂಬಂಧ ಪಟ್ಟ AD ಮತ್ತು AEO ಹಿರಿಯ ಅಧಿಕಾರಿಗಳು, ಆ ಅಧಿಕಾರಿ ಮೇಲೆ ಯಾವ ಶಿಸ್ತಿನ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.
Kshetra Samachara
17/09/2021 05:12 pm