ಹುಬ್ಬಳ್ಳಿ: ಹೈದ್ರಾಬಾದ್ ಸೈದಾಬಾದ ಸಿಂಗರೇನಿ ಕಾಲನಿ 06 ವರ್ಷದ ಮಗುವಿನ ಮೇಲೆ ಅತ್ಯಚಾರ ಮಾಡಿ ಹತ್ಯೆ ಮಾಡಿರುವ ಆರೋಪಿಗೆ, ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ, ಜೈ ಭೀಮ್ ಅಖಿಲ ಭಾರತ ದಲಿತ ಹೋರಾಟ ಸಮಿತಿ ಕಾರ್ಯಕರ್ತರು, ನಗರದ ತಹಶೀಲ್ದಾರ ಕಚೇರಿ ಎದುರುಗಡೆ ಪ್ರತಿಭಟನೆ ಮಾಡಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಇತ್ತೀಚಿನ ದಿನಗಳಲ್ಲಿ, ಮಹಿಳೆಯರು ಸೇರಿದಂತೆ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣ ಹೆಚ್ಚುತ್ತಲೇ ಇದೆ. ಅದೇ ರೀತಿ ದೆಹಲಿಯಲ್ಲಿ ಪೊಲೀಸ್ ಇಲಾಖೆಯಲ್ಲಿದ್ದ ಯುವತಿಯನ್ನು ಸಹ ಅತ್ಯಾಚಾರ ಮಾಡಿ ಅವಳನ್ನು ಹತ್ಯೆಗೈದಿದ್ದಾರೆ. ಆದ್ದರಿಂದ ಕೂಡಲೇ ಕೇಂದ್ರ ಸರ್ಕಾರ ಆರೋಪಿಗಳಿಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾ ಅಧ್ಯಕ್ಷ ಕಲ್ಲಪ್ಪ ಚವ್ಹಾಣ,ಮೌಲಸಾಬ ನಧಾಪ್, ಹನುಮಂತಪ್ಪ ಇಸ್ಮಾಯಿಲ್, ಸಯ್ಯದ್, ಆಸೀಪ್, ಸೇರಿದಂತೆ ಇನ್ನಿತರರು ಇದ್ದರು.
Kshetra Samachara
17/09/2021 02:19 pm