ಹುಬ್ಬಳ್ಳಿ- ಬೇರೆ ಪಕ್ಷದ ಮುಖಂಡರಿಗೆ ಕ್ಷುಲ್ಲಕವಾಗಿ ಮಾತಾಡೋದು ಕಾಂಗ್ರೆಸನವರ ಸಣ್ಣತನವನ್ನು ಪ್ರದರ್ಶನ ಮಾಡುತ್ತದೆ. ಕಲಬುರ್ಗಿಯ ಮಾಜಿ ಸಚಿವರಾಗಿ ಶರಣ ಪ್ರಕಾಶ್ ಪಾಟೀಲರು ಕೆಲಸ ಮಾಡಿದ್ದಾರೆ, ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದುಕೊಂಡು, ಬಿಜೆಪಿ ರಾಜ್ಯಾಧ್ಯಕ್ಷರ ಕುರಿತು ಹಿಂತಾ ಮಾತು ಅವರ ಬಾಯಲ್ಲಿ ಬಂದಿದ್ದು ಅವರ ಚಿಲ್ಲರೆತನ ಪ್ರದರ್ಶಿಸುತ್ತದೆ ಎಂದು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪಬ್ಲಿಕ್ ನೆಕ್ಸ್ಟ್ ಮೂಲಕ ಕಟುವಾಗಿ ಪ್ರತಿಕ್ರಿಯಿಸಿದರು.
ಇನ್ನೂ ಪಾಲಿಕೆ ಅಧಿಕಾರಕ್ಕಾಗಿ ಬಿಜೆಪಿ ಪಕ್ಷ ಜೆಡಿಎಸ್ ಮನೆ ಮುಂದೆ ಕಾಯುತ್ತಿದೆ ಎಂಬ ಪಬ್ಲಿಕ್ ನೆಕ್ಸ್ಟ್ ಪ್ರಶ್ನೆಗೆ ಖಾರವಾಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಬೆಳಿಗ್ಗೆಯಿಂದ ಸಾಯಂಕಾಲ ವರೆಗೆ ಕುಮಾರಸ್ವಾಮಿಗೆ ಬೈತಾರೆ. ಆದರೆ ಸಧ್ಯ ಮಲ್ಲಿಕಾರ್ಜುನ ಖರ್ಗೆ ಕುಮಾರಸ್ವಾಮಿ ಮನೆ ಮುಂದೆ ಭೀಕ್ಷೆ ಬೇಡ್ತಿಲ್ವಾ. ಮೊದಲು ಅವರದು ಅವರು ನೋಡ್ಕೊಳಲಿ ಎಂದು ಕಟುವಾಗಿ ಟೀಕಿಸಿದರು.
Kshetra Samachara
12/09/2021 05:18 pm