ಧಾರವಾಡ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮತದಾನ ಅಂತ್ಯಗೊಂಡಿದ್ದು, ಮತಗಟ್ಟೆಗಳಿಂದ ಇವಿಎಂ ಮಷಿನ್ ಗಳನ್ನು ನಗರದ ಬಾಸೆಲ್ ಮಿಶನ್ ಶಾಲೆಯಲ್ಲಿ ನಡೆಯುತ್ತಿರುವ ಡಿ ಮಸ್ಟರಿಂಗ್ ಕೇಂದ್ರಕ್ಕೆ ಭದ್ರವಾಗಿ ತಂದಿರಿಸಲಾಗುತ್ತಿದೆ. ನಂತರ ಮತಯಂತ್ರಗಳು ಪೊಲೀಸ್ ಭದ್ರತೆಯೊಂದಿಗೆ ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಆವರಣದಲ್ಲಿರುವ ಸ್ಟ್ರಾಂಗ್ ರೂಂ ಗೆ ಸೇರಲಿವೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡುಗಳ ಚುನಾವಣೆಯಲ್ಲಿ ಈ ಬಾರಿ ಸಂಜೆ 5 ಗಂಟೆಗೆ ಶೇಕಡಾ 50.39 ಮತದಾನವಾಗಿದೆ. 2013 ಮಾರ್ಚ್ 7 ರಂದು 67 ವಾರ್ಡುಗಳಿಗೆ ನಡೆದ ಮತದಾನದಲ್ಲಿ ಶೇಕಡಾ 66 ರಷ್ಟು ಮತದಾನವಾಗಿತ್ತು. ಇನ್ನು ಸೆಪ್ಟೆಂಬರ್ 6 ರಂದು ಮತ ಏಣಿಕೆ ನಡೆಯಲಿದೆ.
Kshetra Samachara
03/09/2021 07:53 pm