ಹುಬ್ಬಳ್ಳಿ: ಅದು ರಾಷ್ಟ್ರೀಯ ರಾಜಕೀಯ ಪಕ್ಷ. ಜನರ ಅಭಿವೃದ್ಧಿ ಆಸೆಯನ್ನು ಹೊತ್ತು ಅಧಿಕಾರಕ್ಕೆ ಬಂದಿರುವ ಪಕ್ಷ. ಜನರ ಅಭಿವೃದ್ಧಿಗೆ ಮತ್ತೊಂದು ಅವಕಾಶಕ್ಕಾಗಿ ಜನರ ಮುಂದೆ ಕೈ ಚಾಚಿ ಬೇಡುತ್ತಿದೆ. ಅಲ್ಲದೇ ಮೂವರು ಉಸ್ತುವಾರಿಗಳ ನಡುವಿನ ಶ್ರಮ ಈಗ ಪಕ್ಷದಲ್ಲಿ ಮತ್ತೊಂದು ಆಶಾಭಾವನೆ ಚಿಗುರೊಡೆಯುವಂತೆ ಮಾಡಿದೆ. ಹಾಗಿದ್ದರೇ ಯಾವುದು ಆ ಪಕ್ಷ...? ಅದರ ಕಾರ್ಯ ವೈಖರಿ ಆದರೂ ಏನು ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್..
ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಭಾರತೀಯ ಜನತಾ ಪಕ್ಷ ಈಗ ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂದೇ ಖ್ಯಾತಿ ಪಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಶತಾಯು ಗತಾಯು ಹೋರಾಟ ನಡೆಸಿದೆ. ಹೌದು.. 82 ವಾರ್ಡ್ ಗಳಲ್ಲಿ ಅಭ್ಯರ್ಥಿಗಳನ್ನು ನೇಮಕ ಮಾಡಿದ್ದು, ಮೂವರು ಉಸ್ತುವಾರಿಗಳನ್ನು ನೇಮಕ ಮಾಡಿದೆ. ಅಲ್ಲದೇ ರಾಜ್ಯ ನಾಯಕರ ದಂಡು ವಾಣಿಜ್ಯನಗರಿ ಹುಬ್ಬಳ್ಳಿ ಹಾಗೂ ಫೇಡಾ ನಗರಿ ಧಾರವಾಡಕ್ಕೆ ಲಗ್ಗೆ ಇಟ್ಟಿದ್ದಾರೆ. ಇನ್ನೂ ಉಸ್ತುವಾರಿಗಳಾದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಸಚಿವರಾದ ಶಂಕರಪಾಟೀಲ ಮುನೇನಕೊಪ್ಪ ಹಾಗೂ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಅವಳಿನಗರದಲ್ಲಿ ಕಮಲ ಬಾವುಟ ಹಾರಿಸಲು ಸಿದ್ಧರಾಗಿದ್ದಾರೆ. ಇನ್ನೂ ರಾಜ್ಯ ನಾಯಕರು ಕೂಡ ಬೆಂಬಲ ನೀಡಿದ್ದಾರೆ.
ಈಗಾಗಲೇ ಉಸ್ತುವಾರಿಗಳ ಸಮ್ಮುಖದಲ್ಲಿ ಸಾಕಷ್ಟು ಚುನಾವಣೆ ಪ್ರಚಾರ ನಡೆಸಿದ್ದು,ಈಗಾಗಲೇ ಎಲ್ಲೆಡೆಯೂ ಮತದಾರರನ್ನು ಸೆಳೆಯುವ ಕಾರ್ಯವನ್ನು ಮಾಡಿದ್ದಾರೆ. ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜನಬೆಂಬಲ ಪಡೆದುಕೊಂಡಿರುವ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಎಷ್ಟರಮಟ್ಟಿಗೆ ವಿಜಯ ಪತಾಕೆ ಹಾರಿಸುತ್ತಾರೆ ಕಾಯ್ದು ನೋಡಬೇಕಿದೆ.
Kshetra Samachara
01/09/2021 05:35 pm