ಚಂದ್ರಶೇಖರ ಪೂಜಾರ.. ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಧಾರವಾಡದ ವಾರ್ಡ್ ನಂಬರ್ 18 ರಿಂದ ಕಣಕ್ಕಿಳಿದಿರುವ ಕೈ ನಾಯಕ. ಯುವ ಉತ್ಸಾಹಿ ನಾಯಕ, ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಂತಿರುವ ಚಂದ್ರಶೇಖರ, ತಮ್ಮ ವಾರ್ಡಿಗೆ ಹೊಸತನ ಹಾಗೂ ಹೊಸ ರೂಪ ಕೊಡಬೇಕು ಎಂದು ಚುನಾವಣಾ ಕಣಕ್ಕಿಳಿದಿದ್ದಾರೆ. ಇವರ ಉತ್ಸಾಹ ಹಾಗೂ ನಾಯಕತ್ವದ ಗುಣ ನೋಡಿಯೇ ಕಾಂಗ್ರೆಸ್ ನಾಯಕರು ಇವರಿಗೆ ಟಿಕೆಟ್ ನೀಡಿ ಚುನಾವಣಾ ಕಣಕ್ಕಿಳಿಸಿದ್ದಾರೆ. ವಾಸ್ತವವಾಗಿ ಚಂದ್ರಶೇಖರ ಅವರು ಆ ವಾರ್ಡಿನಿಂದ ಗೆದ್ದು ಬರುವುದು ಖಚಿತ ಎಂದೇ ಹೇಳಲಾಗುತ್ತಿದೆ.
ಚಂದ್ರಶೇಖರ ಪೂಜಾರ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಪಕ್ಷದ ಬೆಳವಣಿಗೆಗೆ ಶ್ರಮಿಸುತ್ತಿರುವ ಯುವ ನಾಯಕ. ಹೊಸತನ ಹಾಗೂ ಹೊಸ ಬಗೆಯ ಅಭಿವೃದ್ಧಿ ದೃಷ್ಟಿಯಿಂದ ಚುನಾವಣಾ ಕಣಕ್ಕಿಳಿದಿರುವ ಚಂದ್ರಶೇಖರ, ತಾವು ಚುನಾಯಿತರಾಗಿ ಆಯ್ಕೆಯಾಗಿ ಬಂದಿದ್ದೇ ಆದಲ್ಲಿ ಏನೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂದುಕೊಂಡಿದ್ದಾರೆ ಎಂಬುದನ್ನು ಸ್ವತಃ ಅವರಿಂದಲೇ ಕೇಳಿ.
ಚಂದ್ರಶೇಖರ 18ನೇ ವಾರ್ಡಿನವರೇ ಆಗಿದ್ದು, ಅಲ್ಲಿನ ಸಮಸ್ಯೆಗಳನ್ನು ಸ್ಪಷ್ಟವಾಗಿ ಅರಿತುಕೊಂಡಿದ್ದಾರೆ. ಜನರಿಗೆ ಏನು ಬೇಕು ಏನು ಬೇಡ ಎಂಬುದನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಈಗಾಗಲೇ ವಾರ್ಡಿನಲ್ಲಿ ಸಾಕಷ್ಟು ಬಿರುಸಿನ ಪ್ರಚಾರ ನಡೆಸಿರುವ ಚಂದ್ರಶೇಖರ ಪೂಜಾರ ಅವರ ಪರವಾಗಿ ಜಯಘೋಷಗಳು ಮೊಳಗುತ್ತಿವೆ. ಒಂದು ಹಂತದಲ್ಲಿ ಪೂಜಾರ ಅವರ ಗೆಲುವು ಪಕ್ಕಾ ಎಂದೇ ಹೇಳಲಾಗುತ್ತಿದೆ. ಪೂಜಾರ ಅವರ ಪರವಾಗಿ ಮಾಜಿ ಸಚಿವ ಸಂತೋಷ್ ಲಾಡ್ ಕೂಡ ಬಿರುಸಿನ ಪ್ರಚಾರ ನಡೆಸಿದರು.
ಸಮರ್ಪಕ ಕುಡಿಯುವ ನೀರು, ವಿದ್ಯುತ್, ಕೆರೆಗಳ ನಿರ್ವಹಣೆ, ರಸ್ತೆಗಳ ದುರಸ್ತಿ, ರುದ್ರಭೂಮಿಗಳ ನಿರ್ವಹಣೆ ಸೇರಿದಂತೆ ಹತ್ತು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕಾರ್ಯರೂಪಕ್ಕೆ ತರುವ ಉದ್ದೇಶ ಚಂದ್ರಶೇಖರ ಅವರದ್ದಾಗಿದೆ. ಈಗಾಗಲೇ ವಾರ್ಡಿನಲ್ಲಿ ಚಂದ್ರಶೇಖರ ಅವರ ಪರವಾಗಿ ಅಲೆ ಬೀಸಿದ್ದು, ಅವರು ಚುನಾಯಿತರಾಗುವುದು ನಿಶ್ಚಿತ ಎನ್ನಲಾಗುತ್ತಿದೆ.
ಈಗಾಗಲೇ ವಾರ್ಡಿನಲ್ಲಿ ಸಾಕಷ್ಟು ಬಿರುಸಿನ ಪ್ರಚಾರ ನಡೆಸಿರುವ ಚಂದ್ರಶೇಖರ, ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಏನೇ ಆಗಲಿ ಯುವ ಉತ್ಸಾಹ ಹೊಂದಿರುವ ಚಂದ್ರಶೇಖರ ಅವರು ವಾರ್ಡ್ ನಂಬರ್ 18 ರಿಂದ ಚುನಾಯಿತರಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಲಿ ಎಂಬುದು ಆ ವಾರ್ಡಿನ ಜನರ ಆಶಯವಾಗಿದೆ.
Kshetra Samachara
01/09/2021 11:15 am