ಧಾರವಾಡ: ವಾರ್ಡ್ ನಂಬರ್ 15 ರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಪಾಲಿಕೆ ಚುನಾವಣಾ ಕಣಕ್ಕಿಳಿದಿರುವ ದೀಪಕ ಚಿಂಚೋರೆ ಅವರ ಪುತ್ರ ಅನಿರುದ್ಧ ಚಿಂಚೋರೆ ಅವರ ಪರವಾಗಿ ಬಿರುಸಿನ ಪ್ರಚಾರ ನಡೆಯುತ್ತಿದೆ.
ಕಳೆದ 40 ವರ್ಷಗಳಿಂದ ಈ ವಾರ್ಡ್‌ನಲ್ಲಿ ಕಾಂಗ್ರೆಸ್ ಗೆಲ್ಲದೇ ಇರುವುದರಿಂದ ಅಲ್ಲಿ ಪ್ರಸಕ್ತ ವರ್ಷ ಕಾಂಗ್ರೆಸ್ ಪಕ್ಷವನ್ನು ಶತಾಯಗತಾಯ ಗೆಲ್ಲಿಸಲೇಬೇಕು ಎಂದು ದೀಪಕ ಚಿಂಚೋರೆ ಅವರು ಪಣ ತೊಟ್ಟಿದ್ದಾರೆ.
ಅನಿರುದ್ಧ ಅವರ ಪರವಾಗಿ ಅವರ ತಾಯಿ, ಪತ್ನಿ ಕೂಡ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಮಾಳಮಡ್ಡಿ, ಗೋಪಾಲಪುರ, ಕಬ್ಬೂರ ರಸ್ತೆಯಲ್ಲಿ ಅನಿರುದ್ಧ ಚಿಂಚೋರೆ ಹಾಗೂ ತಾಯಿ, ಪತ್ನಿ ಬಿರುಸಿನ ಪ್ರಚಾರ ನಡೆಸಿದರು.
Kshetra Samachara
29/08/2021 12:08 pm