ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಭಾಷ್‌ಗೆ ಶಹಬ್ಬಾಷ್‌ ಎನ್ನುತ್ತಾರಾ 14ನೇ ವಾರ್ಡಿನ ಮತದಾರ?

ಸುಭಾಷ್ ಶಿಂಧೆ.. ಹಿರಿಯ ಮುತ್ಸದ್ಧಿ ರಾಜಕಾರಣಿ. ಎರಡು ಬಾರಿ ಪಾಲಿಕೆ ಸದಸ್ಯರಾಗಿ ಆಯ್ಕೆಗೊಂಡು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದವರು. 2001ರಲ್ಲಿ ಅಂದಿನ ವಾರ್ಡ್ ನಂಬರ್ 11 ರಿಂದ ಬಿಜೆಪಿ ಟಿಕೆಟ್ ಪಡೆದು ಗೆದ್ದು ಬಂದಿದ್ದ ಶಿಂಧೆ, ವಾರ್ಡಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ಆನಂತರ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಮತ್ತೊಂದು ಬಾರಿಗೆ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದ ಶಿಂಧೆ, ತಮ್ಮ ವಾರ್ಡಿನ ಜನರ ಜನ ಮನ್ನಣೆ ಗಳಿಸಿದ್ದರು.

ಯೂಥ್ ಕಾಂಗ್ರೆಸ್‌ನಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ಶಿಂಧೆ, ಸತತ 42 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡಿದವರು. ಪ್ರಸಕ್ತ ಸಾಲಿನ ಪಾಲಿಕೆ ಚುನಾವಣೆಗೆ ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗದೇ ಇದ್ದದ್ದಕ್ಕೆ ಮನನೊಂದ ಶಿಂಧೆ ಇದೀಗ ಕಾಂಗ್ರೆಸ್‌ ತೊರೆದಿದ್ದಾರೆ. ಶಿಂಧೆ ಅವರ ಅಭಿವೃದ್ಧಿ ಕಾರ್ಯಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಬಿಜೆಪಿ ನಾಯಕರು ಅವರಿಗೆ 14 ನೇ ವಾರ್ಡಿನಿಂದ ಬಿಜೆಪಿ ಟಿಕೆಟ್ ನೀಡಿ ಕಣಕ್ಕಿಳಿಸಿದ್ದಾರೆ.

2001 ರಲ್ಲಿ ಇವರು ಪಾಲಿಕೆ ಸದಸ್ಯರಾಗಿದ್ದ ಸಂದರ್ಭದಲ್ಲಿ ನಿರಂತರ ನೀರು, ರಸ್ತೆ ಕಾಮಗಾರಿ, ಒಳಚರಂಡಿ ಯೋಜನೆ, ಬೀದಿ ದೀಪ ಹಾಗೂ ನಾಗರಿಕ ಸೌಲಭ್ಯ ಒದಗಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಜನಾಶೀರ್ವಾದ ಪಡೆದಿದ್ದರು. ಸುಭಾಷ್ ಶಿಂಧೆ ಕೇವಲ ರಾಜಕಾರಣಿ ಮಾತ್ರವಲ್ಲ. ರಂಗಭೂಮಿ ಕಲಾವಿದರು ಕೂಡ ಹೌದು. ಅನೇಕ ನಾಟಕಗಳಲ್ಲಿ ತಮ್ಮ ಅನುಭವಿ ನಟನೆಯಿಂದಲೇ ತಮ್ಮನ್ನು ಗುರುತಿಸಿಕೊಂಡವರು. ಹತ್ತು ಹಲವಾರು ವಿಚಾರಗಳನ್ನಿಟ್ಟುಕೊಂಡು ರಾಜಕೀಯಕ್ಕೆ ಬಂದಿರುವ ಶಿಂಧೆ ಅವರದ್ದು ಅನುಭವಿ ರಾಜಕಾರಣ. ಅವರ ವಿಚಾರಗಳೇನು? ಆಗಬೇಕಾದ ಅಭಿವೃದ್ಧಿ ಕೆಲಸಗಳು ಯಾವವು ಎಂಬುದರ ಬಗ್ಗೆ ಅವರೇ ಹೇಳುತ್ತಾರೆ ಕೇಳಿ.

ಸುಭಾಷ್ ಶಿಂಧೆ ಒಬ್ಬ ಕ್ಲೀನ್ ಇಮೇಜ್ ಇರುವ ನಾಯಕ. ಯಾವುದೇ ಪಕ್ಷದಲ್ಲಿದ್ದರೂ ನಿಷ್ಠೆಯಿಂದ ದುಡಿಯುವ ಸಾಮಾನ್ಯ ಕಾರ್ಯಕರ್ತ. ಮರಾಠಾ ಸಮಾಜದ ನಾಯಕರಾಗಿ ಯಾವುದೇ ಜಾತಿ, ಧರ್ಮವನ್ನು ಲೆಕ್ಕಿಸದೇ ಸರ್ವ ಜನಾಂಗದ ಹಿತ ಕಾಯುವ ಸರ್ವ ಜನಾಂಗದ ನಾಯಕ. ಹೀಗಾಗಿಯೇ ಈ ವಾರ್ಡಿನ ಎಲ್ಲ ವರ್ಗದ ಜನ ಶಿಂಧೆ ಅವರ ಬೆನ್ನಿಗೆ ನಿಂತಿದ್ದಾರೆ.

ಈಗಾಗಲೇ ವಾರ್ಡಿನಲ್ಲಿ ಸಾಕಷ್ಟು ಚುನಾವಣಾ ಪ್ರಚಾರ ನಡೆಸಿರುವ ಶಿಂಧೆ ಅವರಿಗೆ ಅಭೂತಪೂರ್ವವಾದ ಬೆಂಬಲ ದೊರೆತಿದೆ. ಮುಸ್ಲಿಂ ಸಮುದಾಯದ ಪವಿತ್ರ ಸ್ಥಾನವಾದ ಮಸೀದಿ ಮುಂಭಾಗದಲ್ಲೇ ಶುಕ್ರವಾರ ಪ್ರಚಾರ ಕಾರ್ಯ ನಡೆಸಿದ ಶಿಂಧೆ ಅವರಿಗೆ ಮುಸ್ಲಿಂ ಬಾಂಧವರು ಕೂಡ ಉತ್ತಮ ಬೆಂಬಲ ಸೂಚಿಸಿದ್ದಾರೆ. ಶಿಂಧೆ ಅವರ ಸ್ಪರ್ಧೆಯಿಂದ ವಾರ್ಡಿನ ಹೆಣ್ಣು ಮಕ್ಕಳು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

14 ನೇ ವಾರ್ಡಿನಲ್ಲಿ ಸರ್ವ ಜನಾಂಗ ಹಾಗೂ ಸಮುದಾಯದ ಜನ ಇದ್ದಾರೆ. ಹೀಗಾಗಿಯೇ ಈ ಜನ ಸರ್ವ ಜನಾಂಗದ ಹಿತ ಕಾಯುವ ನಾಯಕನನ್ನು ಹುಡುಕುತ್ತಿದ್ದಾರೆ. ಆ ಸ್ಥಾನ ತುಂಬುವ ಶಕ್ತಿ ಸುಭಾಷ್ ಶಿಂಧೆ ಅವರಿಗೆ ಇದೆ ಎನ್ನಲಾಗುತ್ತಿದೆ. ಒಟ್ಟಾರೆಯಾಗಿ ಶಿಂಧೆ ಅವರ ಸ್ಪರ್ಧೆಯಿಂದ 14 ನೇ ವಾರ್ಡು ರಂಗು ಪಡೆದುಕೊಂಡಿದ್ದು, ಅವರು ಗೆದ್ದು ಬಂದು ಇನ್ನಷ್ಟು ಸಾಮಾಜಿಕ ಹಾಗೂ ಅಭಿವೃದ್ಧಿ ಪರ ಕೆಲಸ ಮಾಡುವಂತಾಗಲಿ ಎಂದು 14ನೇ ವಾರ್ಡಿನ ಜನ ಬಯಸುತ್ತಿದ್ದಾರೆ.

Edited By : Shivu K
Kshetra Samachara

Kshetra Samachara

29/08/2021 09:38 am

Cinque Terre

49.16 K

Cinque Terre

1

ಸಂಬಂಧಿತ ಸುದ್ದಿ