ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ದಿಲ್‌ಶಾದ್‌ರಿಂದ ಆರನೇ ವಾರ್ಡ್ ಆಗುತ್ತಾ ದಿಲ್‌ಖುಶ್?

ದಿಲ್‌ಶಾದ್‌ ಬೇಗಂ ನದಾಫ್.. ಧಾರವಾಡದ ಆರನೇ ವಾರ್ಡಿನಿಂದ ಚುನಾವಣಾ ಕಣಕ್ಕಿಳಿದಿರುವ ಮಹಿಳಾ ಮಣಿ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಎದುರಾಳಿಗಳಲ್ಲಿ ನಡುಕ ಹುಟ್ಟಿಸಿರುವ ದಿಲ್‌ಶಾದ್‌ ಬೇಗಂ, ಪಾಲಿಕೆ ಚುನಾವಣೆಯಲ್ಲಿ ಗೆದ್ದಿದ್ದೇ ಆದಲ್ಲಿ ಸರ್ವ ಜನಾಂಗದ ಅಭಿವೃದ್ಧಿ ಕೆಲಸಕ್ಕೆ ಕೈ ಹಾಕಿ ತಮ್ಮ ವಾರ್ಡ್‌ನ್ನು ಸುಂದರ ವಾರ್ಡ್‌ನ್ನಾಗಿ ಮಾಡುವ ಪಣ ತೊಟ್ಟಿದ್ದಾರೆ. ನದಾಫ್ ಕುಟುಂಬ ಆರ್ಥಿಕವಾಗಿ ಉತ್ತಮ ಸ್ಥಾನದಲ್ಲಿದೆ. ಹೀಗಾಗಿ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ತಮ್ಮ ವಾರ್ಡಿನ ಜನರ ಆರ್ಥಿಕ ಸಬಲೀಕರಣ ಮಾಡುವ ಉದ್ದೇಶ ಇವರದ್ದಾಗಿದೆ. ಈ ವಾರ್ಡಿನ ಪ್ರಮುಖ ಸಮಸ್ಯೆ ಎಂದರೆ ಮಳೆ ಬಂದರೆ ಸಾಕು ಎಲ್ಲ ಮನೆಗಳಲ್ಲಿ ನೀರು ನುಗ್ಗುತ್ತದಂತೆ ಹೀಗಾಗಿ ಆ ಸಮಸ್ಯೆ ಬಗೆಹರಿಸುವ ಉದ್ದೇಶ ಇವರದ್ದಾಗಿದೆ. ತಮ್ಮ ವಾರ್ಡ್‌ನ್ನು ಧೂಳು ಮುಕ್ತ ವಾರ್ಡ್ ಮಾಡುವ ಗುರಿ ದಿಲ್‌ಶಾದ್‌ ಬೇಗಂ ಅವರದ್ದಾಗಿದೆ. ತಮ್ಮ ಮಕ್ಕಳ ಸಲಹೆ ಪಡೆದು ತಮ್ಮ ವಾರ್ಡಿಗೆ ಏನೆಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು ಎಂಬುದನ್ನು ಬೇಗಂ ಅವರು ಈಗಾಗಲೇ ಲೆಕ್ಕಾಚಾರ ಮಾಡಿಟ್ಟುಕೊಂಡಿದ್ದಾರೆ. ತಮ್ಮ ವಾರ್ಡಿನ ಪ್ರಮುಖ ಸಮಸ್ಯೆಗಳೇನು? ಯಾವೆಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂದುಕೊಂಡಿದ್ದಾರೆ ಎಂಬುದನ್ನು ಸ್ವತಃ ದಿಲ್‌ಶಾದ್‌ ಬೇಗಂ ಅವರೇ ಹೇಳ್ತಾರೆ ಕೇಳಿ.

ವಾರ್ಡ್‌ ನಂಬರ್ 6 ರ ವ್ಯಾಪ್ತಿಗೆ ಧಾರವಾಡದ ಪ್ರಸಿದ್ಧ ಮುರುಘಾಮಠದ ರಸ್ತೆ ಕೂಡ ಬರುತ್ತದೆ. ಪ್ರತಿವರ್ಷ ಅದ್ಧೂರಿಯಿಂದ ಮುರುಘಾಮಠದ ಜಾತ್ರಾ ಮಹೋತ್ಸವ ನಡೆಯುತ್ತದೆ. ಜಾತ್ರೆಗೆಂದು ಬರುವ ಜನರ ಬಾಯಾರಿಕೆ ನೀಗಿಸಲು ಅಲ್ಲಲ್ಲಿ ಕುಡಿಯುವ ನೀರಿನ ಪಾಯಿಂಟ್‌ಗಳನ್ನು ಮಾಡುವ ಉದ್ದೇಶ ಇವರದ್ದಾಗಿದೆ. ಚುನಾವಣೆಗೆ ನಿಂತು ಗೆದ್ದು ಬಂದ ಮೇಲೆ ಹಣ ಮಾಡುವ ಉದ್ದೇಶ ಇವರದ್ದಲ್ಲ. ಜನ ಸೇವೆ ಮಾಡಿ ಬಡ ಜನರಿಗೆ ಸರ್ಕಾರದ ಸವಲತ್ತುಗಳು ಸಿಗುವಂತೆ ಮಾಡಬೇಕು ಎನ್ನುವ ಕನಸು ಹೊಂದಿದ್ದಾರೆ. ಹೀಗಾಗಿಯೇ ಚುನಾವಣೆಗೆ ಸ್ಪರ್ಧೆ ಮಾಡಿರುವ ಇವರಿಗೆ ಈಗಾಗಲೇ ಉತ್ತಮ ಜನ ಬೆಂಬಲ ವ್ಯಕ್ತವಾಗಿದೆ. ಇದೇ ವಾರ್ಡಿನಲ್ಲಿ ಹುಟ್ಟಿ ಬೆಳೆದಿರುವ ದಿಲ್‌ಶಾದ್‌ ಬೇಗಂ ಅವರಿಗೆ ವಾರ್ಡಿನ ಸಮಸ್ಯೆಗಳೇನು ಎಂಬುದರ ಬಗ್ಗೆ ಸಂಪೂರ್ಣ ಅರಿವಿದೆ.

ವಾರ್ಡ್ ನಂಬರ್ 6 ರಲ್ಲಿ ದಿಲ್‌ಶಾದ್‌ ಬೇಗಂ ಅವರನ್ನು ಎಲ್ಲ ಕಾಂಗ್ರೆಸ್ ಕಾರ್ಯಕರ್ತ ಅಭಿಪ್ರಾಯದ ಮೇರೆಗೆ ಕಣಕ್ಕಿಳಿಸಲಾಗಿದೆ. ಹೀಗಾಗಿ ವಾರ್ಡಿನ ಎಲ್ಲ ಜನ ಅದರಲ್ಲೂ ಕಾಂಗ್ರೆಸ್ ಕಾರ್ಯಕರ್ತರು ದಿಲ್‌ಶಾದ್‌ ಬೇಗಂ ಅವರ ಬೆನ್ನಿಗೆ ನಿಂತಿದ್ದಾರೆ. ಉತ್ತಮ ಸ್ಥಾನದಲ್ಲಿರುವ ನದಾಫ್ ಕುಟುಂಬ, ರಾಜಕೀಯ ಪ್ರವೇಶ ಮಾಡಿ ಬದಲಾವಣೆ ತರಬೇಕು ಎನ್ನುವ ಉದ್ದೇಶ ಹೊಂದಿದೆ.

ಏನೇ ಆಗಲಿ ವಾರ್ಡ್ ನಂಬರ್ 6ರಲ್ಲಿ ಉತ್ತಮ ಜನ ಸಂಪರ್ಕ ಹೊಂದಿರುವ ನದಾಫ್ ಕುಟುಂಬ, ಅಲ್ಲಿನ ಜನರ ಪ್ರೀತಿಗೆ ಪಾತ್ರವಾಗಿದೆ. ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರೊಂದಿಗೂ ದಿಲ್‌ಶಾದ್‌ ಬೇಗಂ ಅವರ ಪುತ್ರ ಅಲ್ತಾಫ್ ಅವರು ಉತ್ತಮ ಒಡನಾಟ ಹೊಂದಿದ್ದಾರೆ. ಹೀಗಾಗಿಯೇ ಕಾಂಗ್ರೆಸ್ ಪಕ್ಷದ ಟಿಕೆಟ್ ದಿಲ್‌ಶಾದ್‌ ಬೇಗಂ ಅವರಿಗೆ ಲಭಿಸಿದೆ. ಪಾಲಿಕೆ ಚುನಾವಣೆಯಲ್ಲಿ ದಿಲ್‌ಶಾದ್‌ ಬೇಗಂ ಅವರು ಜಯಭೇರಿ ಬಾರಿಸಿ ತಮ್ಮ ವಾರ್ಡ್‌ನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿ ಎಂಬುದೇ ನಮ್ಮ ಹಾರೈಕೆ.

Edited By : Shivu K
Kshetra Samachara

Kshetra Samachara

27/08/2021 12:34 pm

Cinque Terre

85.95 K

Cinque Terre

3

ಸಂಬಂಧಿತ ಸುದ್ದಿ