ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಾರ್ಡ್‌ ಜನರ ಅಭಿವೃದ್ಧಿಗೆ ಪಣ ತೊಟ್ಟ ಮಾಜಿ ಸೈನಿಕನ ಪತ್ನಿ

ಈ ಫೋಟೋದಲ್ಲಿ ಕಾಣುತ್ತಿರುವ ಸೈನಿಕನ ಹೆಸರು ಏಕನಾಥ ನಾಝರೆ ಅಂತಾ. ಸುಮಾರು 15 ವರ್ಷಗಳ ಕಾಲ ದೇಶ ಸೇವೆ ಮಾಡಿ ನಿವೃತ್ತರಾಗಿ ಬಂದಿದ್ದಾರೆ. ಇವರು ದೇಶ ಸೇವೆ ಮಾಡಿದ ರೀತಿಯಲ್ಲೇ ಇದೀಗ ಇವರ ಪತ್ನಿ ರತ್ನಾ ನಾಝರೆ ಕೂಡ ತಮ್ಮ ವಾರ್ಡಿನ ಸ್ಥಿತಿ ಕಂಡು ಪಾಲಿಕೆ ಚುನಾವಣೆಗೆ ಸ್ಪರ್ಧಿಸಿ ಜನರ ಸೇವೆ ಮಾಡಲು ಮುಂದಾಗಿದ್ದಾರೆ.

ರತ್ನಾ ನಾಝರೆ. ಇವರು ಧಾರವಾಡದ 9 ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ. ನಾಝರೆ ಕುಟುಂಬ ಹಲವು ವರ್ಷಗಳ ಕಾಲ ರಾಜಕಾರಣದಲ್ಲಿ ಅದರಲ್ಲೂ ಬಿಜೆಪಿಯ ಕಟ್ಟಾ ಕುಟುಂಬವಾಗಿ, ಸಂಘ ಪರಿವಾರದ ಮೂಲಕ ತಮ್ಮನ್ನು ಗುರುತಿಸಿಕೊಂಡಿದೆ. ಆ ಕಾರಣದಿಂದಲೇ ಬಿಜೆಪಿ ಈ ಕುಟುಂಬದ ಮಹಿಳಾ ಸದಸ್ಯೆಗೆ ಮಣೆ ಹಾಕಿ ವಾರ್ಡಿನ ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದೆ.

9ನೇ ವಾರ್ಡಿನ ಮಕ್ಕಳ ಶಿಕ್ಷಣಕ್ಕಾಗಿ ಒತ್ತು ಕೊಡುವುದು, ಮೂಲಭೂತ ಸೌಕರ್ಯಗಳಾದ ಚರಂಡಿ ನಿರ್ಮಾಣ, ನೀರಿನ ಸೌಲಭ್ಯ, ಸುಸಜ್ಜಿತ ರಸ್ತೆ, ವಿದ್ಯುತ್ ಸೇರಿದಂತೆ ಇತ್ಯಾದಿ ಸಮಸ್ಯೆಗಳನ್ನು ಬಗೆಹರಿಸಿ ತಮ್ಮ ವಾರ್ಡ್‌ನ್ನು ಮಾದರಿ ವಾರ್ಡ್‌ ಆಗಿ ಪರಿವರ್ತಿಸುವ ಗುರಿ ಹೊಂದಿದ್ದಾರೆ. ರತ್ನಾ ನಾಝರೆ ಅವರ ಪುತ್ರ ರಾಕೇಶ ನಾಝರೆ ಅವರು ಕಟ್ಟಾ ಬಿಜೆಪಿ ಕಾರ್ಯಕರ್ತ. ಸಾಕಷ್ಟು ವರ್ಷಗಳಿಂದ ಪಕ್ಷದಲ್ಲಿ ದುಡಿದು ಪಕ್ಷ ಸಂಘಟನೆಗೆ ಒತ್ತು ನೀಡಿದವರು. ಹೀಗಾಗಿಯೇ ಬಿಜೆಪಿ ಎನ್ನುವ ಶಿಸ್ತಿನ ಪಕ್ಷ ಅವರ ಕಾರ್ಯ ವೈಖರಿ ನೋಡಿ ಪ್ರಸಕ್ತ ಸಾಲಿನ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ.

ಬಿಜೆಪಿ ಪಕ್ಷದಲ್ಲಿ ರಾಕೇಶ ನಾಝರೆ ಅವರು ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದವರು. 9ನೇ ವಾರ್ಡಿನಲ್ಲಿ ಪುರುಷ ಮೀಸಲಾತಿ ಬರದೇ ಇದ್ದರೂ ಬಿಜೆಪಿ, ರಾಕೇಶ್ ಅವರ ತಾಯಿಗೆ ಟಿಕೆಟ್ ನೀಡಿ ಸಾಮಾಜಿಕ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಮೊದಲ ಪಟ್ಟಿಯಲ್ಲಿಯೇ ರಾಕೇಶ್ ಅವರ ತಾಯಿ ರತ್ನಾ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿತ್ತು. ಸೋಮವಾರ ಅಧಿಕೃತವಾಗಿ ರತ್ನಾ ನಾಝರೆ ಅವರು ಬಿಜೆಪಿ ಹುರಿಯಾಳಾಗಿ ನಾಮಪತ್ರ ಸಲ್ಲಿಸಿದ್ದಾರೆ.

9ನೇ ವಾರ್ಡಿನಲ್ಲಿ ರತ್ನಾ ನಾಝರೆ ಅವರಿಗೆ ಉತ್ತಮ ಜನಬೆಂಬಲ ವ್ಯಕ್ತವಾಗಿದೆ. ಜನರ ಸಮಸ್ಯೆಗಳಿಗೆ ಸಹಜವಾಗಿಯೇ ನಾಝರೆ ಕುಟುಂಬದವರು ಸ್ಪಂದಿಸುತ್ತಾರೆ. ಕಳೆದ ಸಾಲಿನಲ್ಲಿ ಬೇರೆಯವರು 9ನೇ ವಾರ್ಡಿಗೆ ಬಂದು ಚುನಾವಣೆಗೆ ನಿಂತು ಗೆದ್ದು ಬಂದಿದ್ದರು. ಪ್ರಸಕ್ತ ವರ್ಷ ತಮ್ಮ ವಾರ್ಡಿನ ಅಭ್ಯರ್ಥಿಯೇ ಚುನಾಯಿತರಾಗಬೇಕು ಎಂಬುದು ಅಲ್ಲಿನ ಜನರ ಆಸೆಯಾಗಿದೆ.

ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎನ್ನುವ ರತ್ನಾ ಅವರ ಆಸೆ ಹಾಗೂ ಗುರಿಗಳಿಗೆ ಮುಪ್ಪಾಗಿಲ್ಲ. ತಮ್ಮ ವಾರ್ಡನ್ನು ಸಮಗ್ರವಾಗಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು. ವಾರ್ಡಿನ ಕೊನೆ ಮತದಾರನಿಗೂ ಸರ್ಕಾರದ ಸೌಲಭ್ಯಗಳು ಸಿಗುವಂತಾಗಬೇಕು ಹಾಗೂ ತನ್ನ ವಾರ್ಡಿನ ಜನ ಸ್ವಾಭಿಮಾನಿಗಳಾಗಿ ಬದುಕುವಂತಾಗಬೇಕು ಎಂಬುದು ರತ್ನಾ ಅವರ ಮುಂದಿನ ಗುರಿಯಾಗಿದೆ. ಏನೇ ಆಗಲಿ ನಾಝರೆ ಅವರ ಪಕ್ಷ ನಿಷ್ಠೆಗೆ ಬಿಜೆಪಿ ಬೆಲೆ ಕೊಟ್ಟಿದ್ದು, ಆ ಕುಟುಂಬದ ರತ್ನಾ ನಾಝರೆ ಅವರು ಚುನಾಯಿತರಾಗಿ ಆಯ್ಕೆಯಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ಆ ವಾರ್ಡಿನ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಲಿ ಎಂಬುದೇ ನಮ್ಮ ಹಾರೈಕೆ.

Edited By : Shivu K
Kshetra Samachara

Kshetra Samachara

24/08/2021 12:23 pm

Cinque Terre

99.07 K

Cinque Terre

1

ಸಂಬಂಧಿತ ಸುದ್ದಿ