ಹುಬ್ಬಳ್ಳಿ- ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಪ್ರಮುಖ ಟಿಕೆಟ್ ಆಕಾಂಕ್ಷಿ ಡಾ. ವಿಜಯಕುಮಾರ್ ಅಪ್ಪಾಜಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈ ಮೂಲಕ ಸ್ಥಳೀಯರನ್ನು ಕಡೆಗಣಿಸಿ ಬೇರೆಯವರಿಗೆ ಟಿಕೆಟ್ ನೀಡಿದ್ದಕ್ಕೆ ಬಿಜೆಪಿ ಇದೀಗ ಪ್ರಬಲ ವಿರೋಧ ಎದುರಿಸಬೇಕಾದ ಪ್ರಸಂಗ ಎದುರಾಗಿದೆ. ಡಾ.ವಿಜಯಕುಮಾರ್ ಅಪ್ಪಾಜಿಗೆ ವಾರ್ಡ್ ನಂಬರ್ 28 ರಿಂದ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಇದೀಗ ಸ್ಥಳೀಯರ ಸ್ವಾಭಿಮಾನಕ್ಕೆ ಪೆಟ್ಟಾಗಿದೆ ಎಂದು ಭಾವಿಸಿದ್ದು, ಬೆಂಬಲಿಗರು ಕೂಡ ಧ್ವನಿಗೂಡಿಸಿದ್ದಾರೆ. ಪರಿಣಾಮ ಬಜೆಪಿ ಟಿಕೆಟ್ ಪ್ರಮುಖ ಆಕಾಂಕ್ಷಿಯಾಗಿದ್ದ ಅಪ್ಪಾಜಿ ಬಂಡಾಯ ಅಭ್ಯರ್ಥಿಯಾಗಿ ಇಂದು ನೂರಾರು ಬೆಂಬಲಿಗರ ಜೊತೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.
ಪಕ್ಷದ ಮೇಲೆ ನಾವು ಮತ ಹಾಕುವುದಿಲ್ಲಾ, ವ್ಯಕ್ತಯನ್ನು ನೋಡಿ ಮತ ಹಾಕುತ್ತೆವೆಂದು ಸ್ಥಳೀಯರ ಮಾತಾಗಿದೆ.
Kshetra Samachara
23/08/2021 06:07 pm