ಅಳ್ನಾವರ: ರಾಜ್ಯ ಸರ್ಕಾರದ ಆಡಳಿತ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿರುವ ಶಾಸಕ ಸಿ.ಎಮ್ ನಿಂಬಣ್ಣವರ್ ಆಗಸ್ಟ್ 23ರಂದು ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಅಳ್ನಾವರ-ಧಾರವಾಡ, ರಾಮನಗರ ರಸ್ತೆಯ ಮಧ್ಯದಲ್ಲಿರುವ ಮೇಲ್ಸೇತುವೆಗಳ ಕಾಮಗಾರಿ ಸ್ಥಗಿತಗೊಂಡಿರುವ ಕಾರಣ ಪಕ್ಕದಲ್ಲಿಯ ಹಾಗೂ ಅಲ್ಲಲ್ಲಿ ಹದಗೆಟ್ಟು ಹೋಗಿರುವ ರಸ್ತೆಯಿಂದ ಆಗಾಗ ಅಪಘಾತಗಳು ಉಂಟಾಗಿ ಜನರು ಪರದಾಟ ನಡೆಸುವಂತಾಗಿದೆ. ಈ ಬಗ್ಗೆ ಹಿಂದಿನ ಸರ್ಕಾರದಲ್ಲಿಯ ಮತ್ತು ಸ್ವ ಪಕ್ಷದ ಆಡಳಿತದ ಅಧಿವೇಶನ ಸಂದರ್ಭ ತಾವು ಕೇಳಲಾಗಿರುವ ಪ್ರಶ್ನೆಗೆ ಸಮರ್ಪಕ ಉತ್ತರ ಬಾರದ ಕಾರಣ ತಾವು ಆ.23ರಂದು ಕೆಲಗೇರಿ ಹತ್ತಿರವಿರುವ ಟೋಲ್ ನಾಕಾ ಹತ್ತಿರ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಿ ಧರಣಿ ಕೈಗೊಳ್ಳಲಾಗುವುದು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಸಾರ್ವಜನಿಕರಿಗೆ ಅವಶ್ಯವಿರುವ ಸೌಕರ್ಯಗಳು ಸಿಗದಂತೆ ಸನ್ನಿವೇಶ ಉಂಟಾದಲ್ಲಿ ಸರ್ಕಾರದ ವಿರುದ್ಧ ಧರಣಿಯನ್ನು ಮುಂದುವರಿಸಲಾಗುವದು ಎಂದು ಶಾಸಕ ಸಿ ಎಮ್ ನಿಂಬಣ್ಣವರ ಹೇಳಿದ್ದಾರೆ.
ಧರಣಿಗೆ ಬೆಂಬಲ ವ್ಯಕ್ತಪಡಿಸಿದ ಈ ಭಾಗದ ಮುಖಂಡರು ಮಾತನಾಡಿ, ವಾಹನಗಳ ಸಂಚಾರದ ಅವ್ಯವಸ್ಥೆಯಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಉಮೇಶ ಭೋಮಣ್ಣವರ, ಶಿವಾಜಿ ಡೊಳ್ಳಿನ, ಲಿಂಗರಾಜ ಮೂಲಿಮನಿ, ನಾರಾಯಣ ಮೋರೆ, ಡಾ ಸಂಜಯ ಚಂದ್ರಗಿಮಠ, ಯಲ್ಲಾರಿ ಹುಬ್ಳಿಕರ, ಪ್ರತಾಪ ಕಲಾಲ, ನೂರ್ ಅಹ್ಮದ ಕಿತ್ತೊರ ಇದ್ದರು.
Kshetra Samachara
21/08/2021 07:58 pm