ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಲಿಕೆ ಚುನಾವಣೆ : ಚುನಾವಣೆ ತರಬೇತಿಗೆ ನೋಡಲ್ ಅಧಿಕಾರಿ, ಮಾಸ್ಟರ್ ಟ್ರೇನರ್ ಗಳ ನೇಮಕ

ಧಾರವಾಡ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಕಾರ್ಯದಲ್ಲಿ ಪಾಲ್ಗೊಳ್ಳುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮುಕ್ತ, ನ್ಯಾಯಸಮ್ಮತ, ನಿಷ್ಪಕ್ಷಪಾತವಾಗಿ ಹಾಗೂ ಶಾಂತಿಯುತವಾಗಿ ಚುನಾವಣೆ ಜರುಗಿಸಲು ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಇವರಿಗೆ ಚುನಾವಣಾ ತರಬೇತಿ ನೀಡಲು ನೋಡಲ್ ಅಧಿಕಾರಿ ಮತ್ತು ಮಾಸ್ಟರ್ ಟ್ರೇನರ್ ಗಳನ್ನು ನೇಮಿಸಿ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಆದೇಶಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಅಗತ್ಯವಿರುವ ತರಬೇತಿಯನ್ನು ಆಯೋಜಿಸಲು ನೋಡಲ್ ಅಧಿಕಾರಿಯನ್ನಾಗಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಎನ್. ರುದ್ರೇಶ್ ಅವರನ್ನು ನೇಮಿಸಲಾಗಿದೆ.

ಮತ್ತು ತರಬೇತಿಗೆ ಮಾಸ್ಟರ್ ಟ್ರೇನರ್ ಗಳನ್ನಾಗಿ, ಹುಬ್ಬಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಪ್ರಸನ್ನ ಪಂಢರಿ ಮತ್ತು ಡಾ.ಶ್ರೀನಿವಾಸ ಕೊಪ್ಪಳ, ಆನಂದ ನಗರ ಹುಬ್ಬಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಗುರುನಾಥ ಹಡಪದ, ಹುಬ್ಬಳ್ಳಿ ನೆಹರು ಕಾಲೇಜ್ನ ಉಪನ್ಯಾಸಕ ಆರ್.ಸಿ. ಹಿರೇಮಠ, ಆನಂದ ನಗರದ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಎನ್.ಎಸ್. ಬಿರಾದಾರ, ರಾಯನಾಳದ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಎಸ್.ಬಿ. ಹಿರೇಮಠ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಸ್ತ್ರಮಠ, ನೀರಾವರಿ ಇಲಾಖೆಯ ಸಬ್ ಡಿವಿಷನ್-2 ರ ಸಹಾಯಕ ಅಭಿಯಂತರ ಪ್ರಶಾಂತ ಎಸ್.ಸತ್ತೂರ, ಎಂ.ವಿ. ಕುರವತ್ತಿಮಠ, ಕಲಘಟಗಿ ಐಟಿಐ ಕಾಲೇಜ್ನ ಸಿ.ಎಫ್. ದ್ಯಾಮನಗೌಡ್ರ ಅವರನ್ನು ನೇಮಕ ಮಾಡಿ ಜಿಲ್ಲಾಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

19/08/2021 05:23 pm

Cinque Terre

14.53 K

Cinque Terre

0

ಸಂಬಂಧಿತ ಸುದ್ದಿ